ಇದೇ ಮಾರ್ಚ್ ೧೪ ಶುಕ್ರವಾರದಂದು ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ದಿವ್ಯ ಉಪಸ್ಥಿತಿಯಲ್ಲಿ ಸಾಲಿಗ್ರಾಮದಲ್ಲಿರುವ ಕೋಟ ಶ್ರೀ ವಿರಾಡ್ವಿಶ್ವಬ್ರಾಹ್ಮಣ ಸಮಾಜೋದ್ಧಾರಕ ಸಂಘದಲ್ಲಿ “ಶ್ರೀ ಸೂಕ್ತ ಹೋಮ” ಕನಕಧಾರಾ ಸ್ತೋತ್ರ ಹೋಮ ಮತ್ತು “ಶ್ರೀ ಗುರುಗಳ ಪಾದುಕಾಪೂಜೆ” ನಡೆಯಲಿದೆ.
ಆನೆಗುಂದಿ ಗುರು ಸೇವಾ ಪರಿಷತ್ ಕೋಟ ಮಂಡಲ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಬೆಳಿಗ್ಗೆ ೬:೩೦ ಕ್ಕೆ ಶ್ರೀ ಸೂಕ್ತ ಹೋಮ ಆರಂಭವಾಗಿದೆ. 9:30ಕ್ಕೆ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ಪೂರ್ಣಕುಂಭ ಸ್ವಾಗತದೊಂದಿಗೆ ಆಗಮನವಾಗಲಿದ್ದು, 10 ಗಂಟೆ ಗೆ ಹೋಮ ಸಂಪನ್ನವಾಗಲಿದೆ. ಬಳಿಕ 10:30ಕ್ಕೆ ಶ್ರೀಗುರುಗಳ ಪಾದುಕಾಪೂಜೆಗೆ ಅವಕಾಶ ಮಾಡಲಾಗಿದ್ದು, 11:30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಧಾರ್ಮಿಕ ಸಭೆಯಲ್ಲಿ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ಆಶೀರ್ವಚನ ನೀಡಲಿದ್ದು, ಆನೆಗುಂದಿ ಗುರು ಸೇವಾ ಪರಿಷತ್ ಕೋಟ ಮಂಡಲದ ಗೌರವ ಸಲಹೆಗಾರರಾದ ವೇದಬ್ರಹ್ಮ ಲಕ್ಷ್ಮೀ ಕಾಂತ್ ಶರ್ಮ ಅವರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಸಭಾ ಕಾರ್ಯಕ್ರಮದಲ್ಲಿ ಗುರು ಸೇವಾ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಬಾರ್ಕೂರು ಶ್ರೀ ಕಾಳಿಕಾಂಬ ದೇವಳದ ಮೊಕ್ತೇಸರರು, ಕೋಟ ಶ್ರೀ ವಿರಾಡ್ವಿಶ್ವಬ್ರಾಹ್ಮಣ ಸಮಾಜೋದ್ಧಾರಕ ಸಂಘ ಅಧ್ಯಕ್ಷರು, ಪದಾಧಿಕಾರಿಗಳು, ವಿಶ್ವಕರ್ಮ ಕಲಾವೃಂದದ ಅದ್ಯಕ್ಷರು, ವಿಶ್ವಜ್ಯೋತಿ ಮಹಿಳಾ ಬಳಗದ ಅಧ್ಯಕ್ಷರು, ಮತ್ತಿತರರು ಉಪಸ್ಥಿತರಿರಲಿದ್ದಾರೆ. ಧಾರ್ಮಿಕ ಸಭೆಯ ಬಳಿಕ ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ.