Monday, March 2, 2026

spot_img

ಸಾಕು ನಾಯಿಯನ್ನು ಬೈಕ್‌ ಗೆ ಕಟ್ಟಿ 2 ಕಿಮೀ ಎಳೆದುಕೊಂಡು ಹೋದ ಆಸಾಮಿ..

ಉಡುಪಿ: ಬುದ್ಧಿವಂತರ ಜಿಲ್ಲೆ ಎಂದೆ ರಾಜ್ಯದಾದ್ಯಂತ ಕರೆಸಿಕೊಳ್ಳುವ ಉಡುಪಿಗೆ ಮಸಿ ಬಳಿಯಲು  ಇಂತಹ ಒಂದು ಘಟನೆ ಸಾಕು. ಯಾಕೆಂದರೆ ಯಾವುದೇ ವಿಚಾರವನ್ನು ಅಳೆದು ತೂಗಿ ನ್ಯಾಯ ಸಮ್ಮತವಾಗಿ ಮಾಡುತ್ತಾರೆ ಎನ್ನುವ ಕಾರಣಕ್ಕೆ ಉಡುಪಿ ಜಿಲ್ಲೆಯವರನ್ನು ಬುದ್ಧಿವಂತರು ಎಂದು ಕರೆಯುತ್ತಾರೆ. ಆದರೆ ಈ ವಿಚಾರದಲ್ಲಿ ಮಾತ್ರ ಈತನಿಗೆ ಅದೇನೋ ಮತಿ ಕೆಟ್ಟಿತ್ತೋ ಗೊತ್ತಿಲ್ಲಾ, ನಿಯತ್ತಿಗೆ ಹೆಸರುವಾಸಿಯಾದ ನಾಯಿಯೊಂದನ್ನು ಬೈಕ್‌ ಗೆ ಕಟ್ಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಳೆದೊಯ್ಯುವ ಮೂಲಕ ದ್ರಾಷ್ಟ್ಯ ಮರೆದ ಈತ ಸದ್ಯ ಸಮಾಜದ ಕೆಂಗಣ್ಣಿಗೆ ಗುರಿಯಾಗಿದ್ದಾನೆ.

 ಈ ಘಟನೆ ನಡೆದಿರುವುದು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ. ಬೈಂದೂರು ಪಡುವರಿ ಮೂಲ ವ್ಯಕ್ತಿಯೋರ್ವರು ಒಂದು ನಾಯಿಯನ್ನು ತಮ್ಮ ಬೈಕ್‌ ಗೆ ಕಟ್ಟಿ ಎಳೆದುಕೊಂಡು ಹೋಗುತ್ತಿರುವ ದೃಶ್ಯವನ್ನು ಹಿಂಬಂದಿಯಲ್ಲಿ ಬರುತ್ತಿದ್ದ ವಾಹನದಲ್ಲಿದ್ದವರು ಸೆರೆ ಹಿಡಿದಿದ್ದಾರೆ. ಸ್ಚಲ್ವ ದೂರದವರೆಗೂ ಬೈಕ್‌ ಗೆ ವೇಗಕ್ಕೆ ಸರಿಯಾಗಿ ಓಡಿ ಓಡಿ ಸುಸ್ತಾದ ನಾಯಿ ಸುಮ್ಮನಾಗಿದೆ, ಆದರೆ ನಾಯಿ ರಸ್ತೆ ಮೇಲೆ ಬಿದ್ದು ಎಳೆದುಕೊಂಡು ಹೋಗುತ್ತಿರು ಕೂಡ ಇದನ್ನು ಗಮನಿಸದೆ ಸುಮಾರು ೨ ಕಿಮೀ ತನಕ ಬೈಕ್‌ ಸವಾರ ನಾಯಿಯನ್ನು ಎಳೆದು ಸಾಗಿದ್ದಾನೆ.

 ಈ ಅಮಾನವೀಯ ಘಟನೆ ಗಮನಿಸಿದ ಕೆಲವರು ಬೈಕ್‌ ಅಡ್ಡಗಟ್ಟಿ ವಿಚಾರಿಸಿದಾಗ ತನಗೆ ಇದು ತಿಳಿದಿಲ್ಲ ಎನ್ನುವಂತೆ ಬೈಕ್‌ ಸವಾರ ವರ್ತಿಸಿದ್ದಾನೆ. ಅಲ್ಲದೇ ನಿಮಗೆ ಏನು ನಾನು ಸಾಕಿದ ನಾಯಿ ನಾನು ಏನು ಬೇಕಾದರೂ ಮಾಡುತ್ತೇನೆ ಎಂದು ಉಡಾಫೆಯಿಂದ ಉತ್ತರ ನೀಡಿದ್ದಾನೆ ನಾಯಿ ಮಾಲಿಕ. ಬಳಿಕ ಸಾಕಷ್ಟು ಜನ ಒಟ್ಟಾಗಿ ಗದರಿಸಿದಾಗ ಮಾಡಿದ ತಪ್ಪು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಸದ್ಯ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಘಟನೆಯ ಕುರಿತು ನೆಟ್ಟಿಗರು, ಪ್ರಾಣಿ ಪ್ರೇಮಿಗಳು ಆಕ್ರೋಶ ಹೊರಹಾಕಿದ್ದಾರೆ

ಈ ಹಿಂದೆ ಇದೇ ರೀತಿಯ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದಾಗ ಈ ನಿಟ್ಟಿನಲ್ಲಿ ಕಟ್ಟು ನಿಟ್ಟಿನ ಕ್ರಮವಾಗಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಆಗ್ರಹ ಕೇಳಿ ಬಂದಿತ್ತು. ಆದರೆ ಇಂತಹ ಘಟನೆಗಳು ಪದೇ ಮರಕಳಿಸುತ್ತಿದ್ದರು ಯಾವುದೇ ಕಠಿಣವಾಗದೇ ಇರುವುದರಿಂದ ಇಂತಹ ಘಟನೆಗಳು ಮರುಕಳಿಸುತ್ತಿದೆ. ಮಾನವೀಯತೆಯುಳ್ಳ ನಾಗರೀಕ ಸಮಾಜದಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು ಪ್ರಾಣಿ ಹಿಂಸೆ ತಕ್ಕ ಶಿಕ್ಷೆಯಾಗಬೇಕು ಎನ್ನುವ ಕೂಗು ಕೇಳಿ ಬಂದಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles