Saturday, July 26, 2025

spot_img

ಸರ್ವ ಪಾಪ ನಾಶಕನಾದ ಸೂರ್ಯದೇವ…

“ಜಪಾಕುಸುಮ ಸಂಕಾಶಂ ಕಶ್ಯಪೇಯಂ ಮಹದ್ಯುತಿ| ತಮೋರಿಸರ್ವ ಪಾಪಘ್ನಂ ಪ್ರಣತೋಸ್ಮಿ ದಿವಾಕರಂ||”🙏🙏🙏

ಮಹಾನ್ ಪ್ರಭೆಯುಳ್ಳ ಸರ್ವ ಪಾಪ ನಾಶಕನಾದ ಸೂರ್ಯದೇವನನ್ನು ಸ್ಮರಿಸುತ್ತಾ . .🙏🙏

ಗ್ರಹ ಸಮೂಹದಲ್ಲಿ ಅತ್ಯಂತ ತೇಜಸ್ಸುಳ್ಳ, ರಾಜನಂತಿರುವ ಗ್ರಹವೇ ಸೂರ್ಯದೇವ. ಈತನನ್ನು ನಾವು ರಾಜನೆಂದೇ ಕರೆಯುತ್ತೇವೆ. ಸೂರ್ಯದೇವನು ಪ್ರಖರ ತೇಜಸ್ಸು, ಮಾತುಗಾರಿಕೆ , ರಾಜಗಾಂಭಿರ್ಯ, ನಾಯಕತ್ವದ ಗುಣ, ಜ್ಞಾನ ಎಲ್ಲವನ್ನೂ ಅನುಗ್ರಹಿಸುತ್ತಾನೆ , ಅಂತೆಯೇ. ಯಾವುದೇ ತಿಂಗಳಿನ ತಾರೀಖು 1, 10, ಮತ್ತು 28 ರಂದು ಹುಟ್ಟಿದ ವ್ಯಕ್ತಿಗಳನ್ನು ಸೂರ್ಯನು ಆಳುವನು.

ವ್ಯಕ್ತಿಯು ತೇಜಸ್ಸಿನಿಂದ ಕೂಡಿದ್ದು, ಕಮ್ಯೂನಿಕೇಷನ್ ಬಹಳ ಚೆನ್ನಾಗಿರುತ್ತದೆ, ನಾಯಕತ್ವದ ಗುಣ ಹುಟ್ಟಿನಿಂದಲೇ ಒಡಗೂಡಿರುತ್ತದೆ. ಬೇರೆಯವರ ಮಾತನ್ನು ಕೇಳಲಾರೆ ಎಂಬ ಮನೋಭಾವ ಇರುತ್ತದೆ. ತಾನು ಹೇಳಿದ್ದೆ ನಡೆಯಬೇಕು ಎನ್ನುವ ಗುಣ ಇರುತ್ತದೆ. ಇದೆಲ್ಲವೂ ಕೂಡ ನಾಯಕತ್ವಕ್ಕೆ ಪುಷ್ಟಿ ಕೊಡುತ್ತದೆ. ಇದಕ್ಕೆ ಸರಿಯಾಗಿ ಮಂಗಳನ ಜೊತೆಯಾದಲ್ಲಿ ವ್ಯಕ್ತಿಯ ಸಾಧನೆಗೆ ಮಿತಿಯೇ ಇರುವುದಿಲ್ಲ.

ಎಷ್ಟು ಎತ್ತರಕ್ಕೂ ಬೆಳೆಯುತ್ತಾರೆ. ಸ್ಕೈ ಐಸ್ ದಿ ಲಿಮಿಟ್ ಅಂತಾರಲ್ಲ ಹಾಗೆ.

ಮೇಲ್ವರ್ಗದ ಅಧಿಕಾರಿ ತನಗಿಂತ ಹೆಚ್ಚು ಜ್ಞಾನವಂತರಿದ್ದಲ್ಲಿ ಮಾತ್ರವೇ ವ್ಯಕ್ತಿ ಅಲ್ಲಿ ಕೆಲಸ ಮಾಡಲು ಬಯಸುತ್ತಾನೆ, ಇಲ್ಲದಿದ್ದಲ್ಲಿ ಆಗ್ಗಾಗ ಜಾಬ್ ಬದಲಿಸುವುದು ಕಂಡು ಬರುತ್ತದೆ. ಈತನ ಪ್ರಬಲ ಶತ್ರುವೆಂದರೆ ಶನಿ ಮಹಾರಾಜ. ಆದ್ದರಿಂದ ವ್ಯಕ್ತಿಗಳಿಗೆ ನಂಬರ್ 8 ಕೂಡ ಒಳ್ಳೆಯದಲ್ಲ.

ಇವರು ಸಾಮಾನ್ಯವಾಗಿ ಆರ್ಟ್, ಮೀಡಿಯಾ, ಎಂಟರ್ಟೈನ್ಮೆಂಟ್, ರಾಜಕೀಯ, ರಿಸರ್ಚ್ ಅಂಡ್ ಡೆವಲಪ್ಮೆಂಟ್, ಹೆಲ್ತ್ ಕೇರ್, ರಾಜಕೀಯ, ಬ್ಯಾಂಕಿಂಗ್, ಕಾನೂನು, ಭಾಷಣಕಾರರು ಇಂತಹ ಕ್ಷೇತ್ರದಲ್ಲಿ ಹೆಚ್ಚಾಗಿ ಕಾಣಸಿಗುತ್ತಾರೆ.

ಸೂರ್ಯದೇವನು ಮುಖ್ಯವಾಗಿ ದೇಹದ ಕಣ್ಣು ಮತ್ತು ಹೃದಯ ಭಾಗವನ್ನು ಆಳುತ್ತಾನೆ. ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸುವುದರಿಂದ ಸೂರ್ಯದೇವನು ಪ್ರಸನ್ನನಾಗುತ್ತಾನೆ. ಇನ್ನೂ ಸಂಖ್ಯಾಶಾಸ್ತ್ರದ ಹಲವಾರು ಪರಿಹಾರಗಳಿಂದ ಸೂರ್ಯನ ಅನುಗ್ರಹವನ್ನು ಪಡೆಯಬಹುದು.

ಜೊತೆಗೆ ಮಂಗಳ ಮತ್ತು ಬುಧಗ್ರಹದ ಸಾತ್ ಇದ್ದಲ್ಲಿ ವ್ಯಕ್ತಿಗಳು ಬಹಳ ಉತ್ತುಂಗಕ್ಕೇರುತ್ತಾರೆ ಅರ್ಥಾತ್ ರಾಜನಂತೆ ಮೆರೆಯುತ್ತಾರೆ . ರಾಜಕೀಯ ಕ್ಷೇತ್ರದ ಎಂಟ್ರಿ ಪಾಸ್ ಕೂಡ ಸೂರ್ಯದೇವನ ಪೋರ್ಟ್ಫೋಲಿಯೋ ದಲ್ಲಿದೆ ! !

Nana Patekar – 1 January 1951
P. V. Narasimha Rao – 28 June 1921
Arun Jaitley – 28 December 1952
Rekha Indian actress. – 10 October 1954
Sri Rajamouli – 10 October 1973


Holla Dinesh – Numerology Consultant – 95919 06335

DECODE * TRNASFORM * PROSPER

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles