ಉಡುಪಿ : ಶ್ರೀ ವಿಶ್ವಬ್ರಾಹ್ಮಣ ಸೇವಾ ಸಮಿತಿ (ರಿ)ಮಧ್ವನಗರ ಇದರ ಹಿತೈಷಿಗಳು ಮಾರ್ಗದರ್ಶಕ ಶಶಿಧರ್ ಪುರೋಹಿತ್ ಅವರ ನೇತೃತ್ವದ ಸಮಾನ ಮನಸ್ಕ ತಂಡದ ಸಹಯೋಗದೊಂದಿಗೆ ಮಧ್ವ ನಗರ ಮೂಡುಬೆಟ್ಟು ಪರಿಸರದ ಆಯ್ದ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಗಳಾಗಿ ದಾನಿಗಳಾದ ದಿವಾಕರ ಆಚಾರ್ಯ ಉಡುಪಿ, ಹರೀಶ್ ಆಚಾರ್ಯ ಕಳತ್ತೂರು, ಸಂದೀಪ್ ಆಚಾರ್ಯ ಮಧ್ವನಗರ, ಶ್ರೀಮತಿ ಮತ್ತು ವಿದ್ಯಾ ಉಮೇಶ್ ಆಚಾರ್ಯ ಕತಾರ್, ಸಂಘದ ಅಧ್ಯಕ್ಷರಾದ ರಾಜೇಶ್ ಆಚಾರ್ಯ ಮಧ್ವನಗರ ಉಪಸ್ಥಿತರಿದ್ದರು. ಸಂಘದ ಸದಸ್ಯರಾದ ಶ್ರೀಪತಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.