ಉಡುಪಿ : ಉಡುಪಿ ಪುತ್ತೂರು ಗ್ರಾಮದ ಕೊಡಂಕೂರು ನ್ಯೂ ಕಾಲೋನಿಯಲ್ಲಿ ನಡೆದ ಕಳ್ಳತನ ನಡೆಸಿ ಪರಾರಿಯಾಗಿದ್ದ ಅಂತರ್ ರಾಜ್ಯ ಮನೆಕಳ್ಳನನ್ನು ಪೊಲೀಸ್ ರು ವಶಕ್ಕೆ ಪಡೆದಿದ್ದಾರೆ. ಮೊಹಮ್ಮದ್ ಆಸೀಪ್ ಬೆಟಗೇರಿ ಬಂಧಿತ ಅಂತರ್ ರಾಜ್ಯ ಮನೆಗಳ್ಳತನದ ಆರೋಪಿ. ಇದೇ ಜುಲೈ 5ರಂದು ಉಡುಪಿ ಪುತ್ತೂರು ಗ್ರಾಮದ ಕೊಡಂಕೂರು ನ್ಯೂ ಕಾಲೋನಿಯಲ್ಲಿ ಮಧ್ಯರಾತ್ರಿಯಲ್ಲಿ ಆರೋಪಿ ಮೊಹಮ್ಮದ್ ಆಸೀಪ್ ತನ್ನ ಜೊತೆಗಾರರೊಂದಿಗೆ 3 ಮನೆಗಳ ಬೀಗವನ್ನು ಮುರಿದು ಆ ಮನೆಗಳಲ್ಲಿರುವ ಚಿನ್ನಾಭರಣ ಮತ್ತು ಬೆಳ್ಳಿಯ ಆಭರಣ ಹಾಗೂ ನಗದು ಹಣವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ. ಬಳಿಕ ಕದ್ದ ವಸ್ತುಗಳನ್ನು ಭಟ್ಕಳ ಹಾಗೂ ಶಿರಸಿ ಕಡೆಗಳಲ್ಲಿ ಮಾರಾಟ ಮಾಡಿ ಹಣವನ್ನು ಪಡೆದಿರುತ್ತಾನೆ.

ಈ ಕುರಿತು ದೂರು ದಾಖಲಾದ ಹಿನ್ನಲೆಯಲ್ಲಿ ಕಾರ್ಯಾಚರಣೆ ನಡೆಸಿದ ಉಡುಪಿ ಪೊಲೀಸ್ ರು ಆರೋಪಿಯನ್ನು ಬಂಧಿಸಿದ್ದಾರೆ. ಅಲ್ಲದೇ ಆರೋಪಿ ಭಟ್ಕಳ ಹಾಗೂ ಶಿರಸಿ ನಗರದಲ್ಲಿ ಕಳವು ಮಾಡಿ ವಿಲೇವಾರಿ ಮಾಡಿದ ಸುಮಾರು 8.50 ಲಕ್ಷ ಮೌಲ್ಯದ ಅಂದಾಜು 95.5 ಗ್ರಾಂ ಚಿನ್ನಾಭರಣ 255 ಗ್ರಾಂ ಬೆಳ್ಳಿಯನ್ನು ವಶಕ್ಕೆ ಪಡೆದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ತನಿಖೆ ವೇಳೆ ಈತ ಶಿವಮೊಗ್ಗ ಜಿಲ್ಲೆಯ ಸಾಗರ ಟೌನ್ ಪೊಲೀಸ್ ಠಾಣೆ ದಾವಣಗೆರೆ ಜಿಲ್ಲೆ ನ್ಯಾಮತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಕಳವು ಮಾಡಿರುವುದಾಗಿಯೂ, ಅಲ್ಲದೇ ಈ ಹಿಂದೆ ಗೋವಾದಲ್ಲಿ 4 ಪ್ರಕರಣಗಳು, ಉತ್ತರ ಪ್ರದೇಶ ರಾಜ್ಯದಲ್ಲಿಯೂ ಕೂಡ ಕಳವು ಹಾಗೂ ಇತರ ಪ್ರಕರಣಗಲ್ಲಿ ತಾನೂ ಹಾಗೂ ತನ್ನ ಸಹೋದರ ಆರೀಫ್, ಅನೀಸ್ ಹಾಗೂ ಸಂಬಂದಿ ಸಲೀಂ, ಶೋಯೆಬ್ ಎಲ್ಲರೂ ಸೇರಿ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಸದ್ಯ ಆರೋಪಿ ಆಸೀಪ್‌ನ ಸಹೋದರ ಆರೀಪ್ ಹಾಗೂ ಇತರರು ತಲೆಮರೆಸಿ ಕೊಂಡಿದ್ದು, ಇವರ ಪತ್ತೆಯ ಕಾರ್ಯಚರಣೆ ಮುಂದುವರಿದಿದೆ..
.