ಕುಂದಾಪುರ: ಕುಂದಾಪುರ ಸಮೀಪದ ಗೋಪಾಡಿ ಎಂಬಲ್ಲಿ ಸಮುದ್ರ ತೀರಕ್ಕೆ ಈಜಲು ತೆರಳಿದ್ದ 7 ಜನ ಯುವಕರಲ್ಲಿ ಮೂವರು ನೀರು ಪಾಲಾದ ಘಟನೆ ಭಾನುವಾರ ನಡೆದಿದೆ. ಕುಂದಾಪುರ ತಾಲೂಕಿನ ಗೋಪಾಡಿ ಚೆರ್ಕಿ ಕಡು ಎಂಬಲ್ಲಿ ಬೆಂಗಳೂರು ಮೂಲದ 9 ಜನ ಯುವಕರ ತಂಡ ಬೀಚ್ ಪರಿಸರಕ್ಕೆ ಬಂದಿದ್ದರು. ಇದರಲ್ಲಿ 7 ಜನ ಕಡಲಿಗೆ ಇಳಿದು ನೀರಿನಲ್ಲಿ ಆಡವಾಡುತ್ತಿದ್ದಾಗ, ಮೂವರು ನೀರು ಪಾಲಾಗಿದ್ದಾರೆ.

ಬೆಂಗಳೂರಿಂದ ಬಂದಿದ್ದ 10 ಮಂದಿ ಯುವಕರ ತಂಡವು ಕುಂಭಾಶಿಯ ಗಾಯಿತ್ರಿ ಕಂಪರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದರು. ಇಂದು ಮಧ್ಯಾಹ್ನ 9 ಮಂದಿ ಯುವಕರು ಗೋಪಾಡಿ ಚೆರ್ಕಿ ಕಡು ಸಮುದ್ರ ತೀರಕ್ಕೆ ಬಂದಿದ್ದಾರೆ. ಸಮುದ್ರ ನೋಡಿದ ಖುಷಿಯಲ್ಲಿ 7 ಮಂದಿ ಯುವಕರು ನೀರಿನಲ್ಲಿ ಆಟವಾಡಲು ಸಮುದ್ರಕ್ಕೆ ಇಳಿದ್ದಿದ್ದಾರೆ. ಇದೆ ಸಂದರ್ಭ ಅಲೆಗಳ ಅಬ್ಬರಕ್ಕೆ ನಾಲ್ವರು ಕೊಚ್ಚಿ ಹೋಗಿದ್ದು ಓರ್ವನ ಮೃತದೇಹ ಸಿಕ್ಕಿದೆ.

ಇನ್ನೋರ್ವನನ್ನು ರಕ್ಷಿಸಿದ್ದು, ಗಂಭೀರಗೊಂಡಿದ್ದ ಆತನನ್ನು ತಕ್ಷಣ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಯಿತು. ಇನ್ನೋರ್ವ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಮತ್ತೋರ್ವ ಸಮುದ್ರ ಪಾಲಾಗಿದ್ದು ನಾಪತ್ತೆಯಾಗಿದ್ದಾನೆ. ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ದಳ ಹಾಗೂ ಪೊಲೀಸರು ಭೇಟಿ ನೀಡಿದ್ದಾರೆ. ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡ ಹಾಗೂ ಸ್ಥಳೀಯರಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.


