Saturday, July 5, 2025

spot_img

ಸಮಗ್ರ ತನಿಖೆ ಆಗುವುದು ಅಗತ್ಯ: ತಿಂಗಳೆ

ಉಡುಪಿ: ಎನ್‌ಸಿಬಿ ಅಧಿಕಾರಿಗಳು, ಮಾದಕ ದ್ರವ್ಯ ಪೂರೈಕೆ ಪ್ರಕರಣದಲ್ಲಿ ಉಡುಪಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾಲ್‌ಸೆಂಟರ್ ಮುಖ್ಯಸ್ಥನನ್ನು ಬಂಧಿಸುವ ಮೂಲಕ ಉಡುಪಿ-ಮಣಿಪಾಲ ಪರಿಸರದಲ್ಲಿ ಡ್ರಗ್ಸ್ ಜಾಲ ದೊಡ್ಡ ಮಟ್ಟ ಬೇರೂರಿದೆ ಎಂಬ ಅಂಶವನ್ನು ಬಯಲಿಗೆಳೆದಿದ್ದಾರೆ. ರಾಜ್ಯ ಸರಕಾರ ಹಾಗು ಜಿಲ್ಲಾ ಪೋಲಿಸ್ ಡ್ರಗ್ಸ್ ಜಾಲವನ್ನು ಮಟ್ಟಹಾಕಲು ವಿಶೇಷ ಕಾರ್ಯತಂತ್ರಗಳನ್ನು ರೂಪಿಸಬೇಕೆಂದು ಬಿಜೆಪಿ ಮುಖಂಡ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ದಶಕಗಳಿಂದಲೂ ಜಿಲ್ಲೆಯಲ್ಲಿ ಮಾದಕ ದ್ರವ್ಯದ ಜಾಲ ಇದೆ ಎಂದು ಆರೋಪಿಸುತ್ತಿದ್ದೇವು. ಈಗ ಅಂತರಾಷ್ಟ್ರೀಯ ಮಾದಕ ದ್ರವ್ಯ ಜಾಲಕ್ಕೂ ಉಡುಪಿಯ ನಂಟಿದೆ ಎಂಬುದು ದುರಂತ. ಬುದ್ದಿವಂತರ ಜಿಲ್ಲೆಯಲ್ಲಿ ಅನ್ಯ ರಾಜ್ಯ, ದೇಶಗಳಿಂದ ವಿದ್ಯಾಭ್ಯಾಸಕ್ಕೆಂದು ಆಗಮಿಸಿ ವಿದ್ಯಾರ್ಜನೆ ಪಡೆಯುತ್ತಿದ್ದಾರೆ. ಅಂತಹ ಜಿಲ್ಲೆಗೆ ಕಪ್ಪು ಚುಕ್ಕಿಯಂತೆ ಡ್ರಗ್ಸ್ ಜಾಲ ಹಬ್ಬಿರುವುದು ಕಳಂಕಿತ. ಈ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಕಾಲ್ ಸೆಂಟರ್‌ಗಳ ಮಾಹಿತಿಯನ್ನು ಪಡೆದು ಸಮಗ್ರ ತನಿಖೆಯನ್ನು ನಡೆಸಬೇಕೆಂದು ಆಗ್ರಹಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles