ಕುಂದಾಪುರ: ಜಿಲ್ಲಾ ರಾಜ್ಯೋತ್ಸವ ಪಡೆದ ಒಳ್ಳೆಯ ಪರಿಕಲ್ಪನೆಯೊಂದಿಗೆ ಸಂಸ್ಥೆಯನ್ನು ಹುಟ್ಟು ಹಾಕಿ ಸಮಾಜಮುಖಿ ಕೆಲಸ ಒಂದು ವೃತ್ತಿ ಬಾಂಧವರ ಹಿತ ಚಿಂತನೆಯೊಂದಿಗೆ ಸಮಾಜಮುಖಿ ಕೆಲಸವನ್ನು ಮಾಡುತ್ತ ಬಂದಿರುವುದರಿಂದ ಈ ಸಂಸ್ಥೆಗೆ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದೆ ಎಂದು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು,

ಅವರು ಭಾನುವಾರದಂದು ಕುಂದಾಪುರ ಗಾಂಧಿ ಮೈದಾನದಲ್ಲಿ ಕುಂದಾಪುರ, ಬೈಂದೂರು ಭಾಗದ ಫೋಟೋಗ್ರಾಫರ್ ಅಸೋಸಿಯೇಷನ್ ಆಯೋಜಿಸಿದ ಕ್ರೀಡಾಕೂಟವನ್ನು ಉದ್ಘಾಟಿಸಿ, ಮಾತನಾಡುತ್ತಾ, ಇವತ್ತು ವೃತ್ತಿಯಲ್ಲಿ ಎಷ್ಟೇ ಸಮಸ್ಯೆ ಪೈಪೋಟಿ ಇರಬಹುದು ಅದನ್ನು ಎಲ್ಲ ಮರೆತು ಒಕ್ಕೂಟವನ್ನು ಮಾಡಿಕೊಂಡು ಸಂಸ್ಥೆಯನ್ನು ಕಟ್ಟಿಕೊಂಡು ಇಡೀ ವ್ಯವಸ್ಥೆಯಲ್ಲಿ ಒಳ್ಳೆಯ ಕೆಲಸ ಮಾಡಬೇಕೆನ್ನುವ ನಿಟ್ಟಿನಲ್ಲಿ ತಾವೆಲ್ಲರೂ ಇವತ್ತು ಕ್ರೀಡಾಕೂಟವನ್ನು ಆಯೋಜಿಸಿದ್ದೀರಿ.

ಇದರಲ್ಲಿ ಒಂದು ದಿನ ನಾವೆಲ್ಲ ಒಂದೇ ಮನೆಯವರಂತೆ ಕ್ರೀಡಾಕೂಟದಲ್ಲಿ ಭಾಗವಹಿಸಿ ನಿಮ್ಮ ಸಂಘದ ಒಗ್ಗಟ್ಟನ್ನು ತೋರಿಸಿದ್ದು ಸಂಘಟನೆಗಳು ನಿಜವಾಗಲೂ ಅಗತ್ಯ ಒಬ್ಬೊಬ್ಬರ ಕೂಗು ಯಾರಿಗೂ ಕೂಡ ಕೇಳುವುದಿಲ್ಲ. ಅದೇ ಸಂಘಟನೆಯಲ್ಲಿ ಮಾಡಿದ ಕೂಗಿಗೆ ಸರ್ಕಾರಗಳು ಬೇರೆ ಬೇರೆ ಸಂಸ್ಥೆಗಳು ಮನ್ನಣೆಯನ್ನು ನೀಡುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಉಡುಪಿ ಎಸ್.ಕೆ.ಪಿ.ಎ. ಅಧ್ಯಕ್ಷ ಪದ್ಮಪ್ರಸಾದ್ ಜೈನ್ ವಹಿಸಿದ್ದರು. ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಅಧ್ಯಕ್ಷ ಎಸ್ ಪ್ರಕಾಶ್ ಚಂದ್ರ ಶೆಟ್ಟಿ ಕ್ರೀಡಾ ಜ್ಯೋತಿಯ ಪುರ ಮೆರವಣಿಗೆಗೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿಉದ್ಯಮಿ ರಮೇಶ್ ದೇವಾಡಿಗ ವಂಡ್ಸೆ, ದಿವಾಕರ ಶೆಟ್ಟಿ, ಕರುಣಾಕರ ಕಾನಂಗಿ, ದಯಾನಂದ ಬಂಟ್ವಾಳ, ವಾಸುದೇವರಾವ್, ಆನಂದ್ ಬಂಟ್ವಾಳ, ರಂಜಿತ್ ಮೆಂಡನ್, ಭಾರದ್ವಾಜ್, ಉಡುಪಿ ಹಾಗೂ ಕುಂದಾಪುರ ಮತ್ತು ಬೈಂದೂರು ವಲಯದ ಪದಾಧಿಕಾರಿಗಳು ಪ್ರಮುಖರು ಉಪಸ್ಥಿತರಿದ್ದರು.