ಉಡುಪಿ : ಶ್ರೀ ಶೀರೂರು ಮಠದ ಪರ್ಯಾಯದ ಕುರಿತಂತೆ ಉಡುಪಿ ಜಿಲ್ಲೆಯ ಮಹಿಳೆಯರ ಸಭೆ ಶೀರೂರು ಮಠದಲ್ಲಿ ನಡೆಯಿತು. ಶ್ರೀ ಶ್ರೀ ಶ್ರೀ ವೇದ ವರ್ಧನ ಶ್ರೀಪಾದರು ಆಶೀರ್ವಚನವನ್ನು ನೀಡಿ ಶೀರೂರು ಪರ್ಯಾಯ ಕೃಷ್ಣಭಕ್ತರ ಪರ್ಯಾಯ,ನಮ್ಮ ನಿಮ್ಮೆಲ್ಲರ ಪರ್ಯಾಯ ಎಲ್ಲರೂ ಒಟ್ಟಾಗಿ ಕೃಷ್ಣ ಸೇವೆಯಲ್ಲಿ ಭಾಗಿಯಾಗೋಣ ಎಂದು ಆಶೀರ್ವಚನ ನೀಡಿದರು. ದಿವಾನರಾದ ಶ್ರೀ ಉದಯ ಕುಮಾರ್ ಸರಳತ್ತಾಯರು ಮಾತನಾಡಿ, ಪರ್ಯಾಯದ ಸಂದರ್ಭದಲ್ಲಿ ಮಾತ್ರ ಕೃಷ್ಣನ ಸೇವೆ ಮಾಡುವುದಲ್ಲ ಶೀರೂರು ಪರ್ಯಾಯ ಎರಡು ವರ್ಷವೂ ಕೃಷ್ಣನಸೇವೆ ಮಾಡಬೇಕು ಮುಖ್ಯವಾಗಿ ಮಹಿಳೆಯರು ಕೃಷ್ಣ ಸೇವೆಯಲ್ಲಿ ತೊಡಗಿಸಿ ಕೊಂಡರೆ ಲೋಕಕ್ಕೆ ಒಳಿತಾಗುವುದು ಎಂದರು.

ಸ್ವಾಗತ ಸಮಿತಿಯ ಅಧ್ಯಕ್ಷರಾದ ಯಶ್ಪಾಲ್ ಸುವರ್ಣರವರು ಮಾತನಾಡಿ ಮಹಿಳಾ ವಿಭಾಗ ಕಾರ್ಯವೈಕರಿ ಬಗ್ಗೆ ತಿಳಿಸಿದರು. ಪ್ರಧಾನ ಕಾರ್ಯದರ್ಶಿಗಳಾದ ಮಟ್ಟಾರ್ ರತ್ನಾಕರ್ ಹೆಗ್ಡೆ ಯವರು ಮಾತನಾಡಿ ಅನ್ನ ಬ್ರಹ್ಮ ನ ಕ್ಷೇತ್ರದಲ್ಲಿ ಸೇವೆ ಮಾಡಿ ಊರ ಪರವೂರ ಭಕ್ತರಿಗೆ ಉತ್ತಮ ಆತಿಥ್ಯ ನೀಡಬೇಕು.ಮಹಿಳೆಯರು ಪರ್ಯಾಯದ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಇದೇ ಸಂದರ್ಭ ಮಹಿಳಾ ವಿಭಾಗದ ಸಂಚಾಲಕರ ಆಯ್ಕೆ ನಡೆಯಿತು, ಮಹಿಳಾ ಸಂಚಾಲಕರುಗಳಾಗಿ ಪದ್ಮ ರತ್ನಾಕರ್, ನಯನಗಣೇಶ್, ವೀಣ ಎಸ್ ಶೆಟ್ಟಿ, ವಸಂತಿ ರಾವ್ ಕೊರಡ್ಕಲ್, ಜ್ಯೋತಿ ಹೆಬ್ಬಾರ್ ಸಹಸಂಚಾಲಕರುಗಳಾಗಿ ತಾರ ಆಚಾರ್ಯ, ಸಂಧ್ಯಾ ರಮೇಶ್, ಶೋಭಾ ಉಪಾದ್ಯಾಯ, ಪದ್ಮಲತಾ ಎಂ ಎಸ್, ಭಾರತಿ, ದಿವ್ಯಾ ವಿ ಪ್ರಸಾದ್, ನೀತಾ ಪ್ರಭು, ಮಮತ ಶೆಟ್ಟಿ, ನಳಿನಿ ಪ್ರದೀಪ್, ಮೀನಾಕ್ಷಿ ಬನ್ನಂಜೆ, ಮಾಯ ಕಾಮತ್, ಇಂದಿರಾ ಶಶಿಧರ್, ಸುಮಂಗಲ ಅವರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿಯ ಕೋಶದಿಕಾರಿಗಳಾದ ಜಯಪ್ರಕಾಶ್ ಕೆದ್ಲಾಯ, ಕಾರ್ಯದರ್ಶಿ ಗಳಾದ ಮೋಹನ್ ಭಟ್, ಜೊತೆ ಕಾರ್ಯದರ್ಶಿ ಗಳಾದ ಸಂದೀಪ್ ಮಂಜ, ವಿಷ್ಣು ಪ್ರಸಾದ್ ಪಾಡಿಗಾರ್ ಉಪಸ್ಥಿರಿದ್ದರು. ಜೊತೆ ಕಾರ್ಯದರ್ಶಿಗಳಾದ ಶ್ರೀಕಾಂತ್ ನಾಯಕ್ ಅವರು ಕಾರ್ಯಕ್ರಮ ನಿರೂಪಣೆ ಮಾಡಿ ಧನ್ಯವಾದ ಸಮರ್ಪಿಸಿದರು.