ಕುಂದಾಪುರ : ಕಡಲೂರಿನ ಕರಾವಳಿ ಭಾಗದ ಕೋಟೇಶ್ವರ ಬೀಜಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಶ್ರೀ ಬಂಡಿಕಡು ಬೊಬ್ಬರ್ಯ ದೇವಸ್ಥಾನ ಸೇವಾ ಸಮಿತಿ ರಿ. ಹಾಗೂ ಮಹಿಳಾ ಸೇವಾ ಸಂಘ
ಕಮ್ತೀಯಾರ್ ಬೆಟ್ಟು ಹೋದ್ರಾಳಿ ಬೀಜಾಡಿ. ವತಿಯಿಂದ ನಡೆದ ದೇವಸ್ಥಾನದ 14ನೇ ವರ್ಷದ ವರ್ಧಂತ್ಯೋತ್ಸವದ ಧಾರ್ಮಿಕ ಕಾರ್ಯಕ್ರಮಕ್ಕೆ ಕುಂದಾಪುರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿ ಯವರು ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ಇದೆ ವೇಳೆ ಶ್ರೀ ಬಂಡಿಕಡು ಬೊಬ್ಬರ್ಯ ಸೇವಾ ಸಮಿತಿಯ ತುಂಬಾ ವರುಷದಿಂದ ಬೇಡಿಕೆಯಾದ ದೇವಸ್ಥಾನಕ್ಕೆ ಸಮರ್ಪಕ ರಸ್ತೆ ಇಲ್ಲದ ಕಾರಣ ಶಾಸಕರ ಗಮನಕ್ಕೆ ತಂದು ದೇವಸ್ಥಾನಕ್ಕೆ ಸಮರ್ಪಕವಾಗಿ ರಸ್ತೆಯನ್ನು ಕಲ್ಪಿಸುವಂತೆ ವಿನಂತಿಸಿದರು ಹಾಗೆ ಶಾಸಕರು ಮಾತನಾಡಿ ಖಾಸಗಿ ಜಾಗವಾಗಿರುವುದರಿಂದ ಇದನ್ನು ಸಂಬಂಧಪಟ್ಟ ವಾರಿಸುದಾರರ ಜೊತೆಗೆ ಮಾತುಕತೆ ಮೂಲಕ ಬಗೆಹರಿಸಿ ಕೊಳ್ಳಬೇಕಾಗಿದ್ದು, ಸರಕಾರದ ಮೂಲಕ ಅನುದಾನವನ್ನು ತರುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿಶ್ರೀ ಬಂಡಿಕಡು ಬೊಬ್ಬರ್ಯ ದೇವಸ್ಥಾನ ಸೇವಾ ಸಮಿತಿ ಗೌರವಾಧ್ಯಕ್ಷರಾದ ಶ್ರೀಧರ್ ಎಂ ಮೊಗವೀರ, ಸಮಿತಿ ಅಧ್ಯಕ್ಷರಾದ ಬಸವರಾಜ್, ಸಮಿತಿಯ ಕಾರ್ಯದರ್ಶಿ ಜಗನ್ನಾಥ್, ಬೀಜಾಡಿ ಗ್ರಾಮ ಪಂಚಾಯಿತಿನ ಸದಸ್ಯರಾದ ವಿಶ್ವನಾಥ ಮೊಗವೀರ, ಶ್ರೀಮತಿ ಪೂರ್ಣಿಮಾ, ಪ್ರಸನ್ನ ದೇವಾಡಿಗ, ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು, ಸಮಿತಿಯ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು