ಉಡುಪಿ : ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ವಾರ್ಷಿಕ ಕಾಲೇಜು ದಿನಾಚರಣೆಯನ್ನು “ಅಭಿನವ – 2025” ಭಾವಪ್ರಕಾಶ ಹೊರ ಮೈದಾನದಲ್ಲಿ ನಡೆಯಿತು. 2024 ರ ವರ್ಷವಿಡೀ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ವಿಜೇತರಿಗೆ ಸುಮಾರು 110 ಬಹುಮಾನ ವಿತರಿಸುವ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು.

ಬಹುಮಾನ ವಿತರಣೆಯ ನಂತರ, ವಿದ್ಯಾರ್ಥಿಗಳ ಸಾಂಸ್ಕೃತಿಕ ಪ್ರದರ್ಶನಗಳಾದ ನೃತ್ಯ, ಗಾಯನ ಮತ್ತು ಇತರ ಕಲಾತ್ಮಕ ಪ್ರದರ್ಶನಗಳಿಂದ ಪ್ರೇಕ್ಷಕರು ಆಕರ್ಷಿತರಾದರು. ಚಂಡೆ ಕ್ಲಬ್, ಯಕ್ಷಗಾನ ಕ್ಲಬ್ ಮತ್ತು ಇತರವುಗಳನ್ನು ಒಳಗೊಂಡಂತೆ ವಿವಿಧ ವಿದ್ಯಾರ್ಥಿ ಕ್ಲಬ್‌ಗಳು ತಮ್ಮ ವಿಶಿಷ್ಟ ಸಾಂಪ್ರದಾಯಿಕ ಮತ್ತು ಸಮಕಾಲೀನ ಪ್ರದರ್ಶನಗಳನ್ನು ಪ್ರದರ್ಶನ ನಡೆಯಿತು.