ಉಡುಪಿ : ಭಾಷಾ ವಿಜ್ಞಾನಾದಿ ನಾನಾ ಕ್ಷೇತ್ರಗಳ ವಿದ್ವಾಂಸರೂ, ಸಂಗೀತ ಪ್ರಿಯರೂ ಆದ ಡಾ. ಸುಶೀಲಾ ಉಪಾಧ್ಯಾಯ ಇವರ ಸಂಸ್ಮರಣೆಯಲ್ಲಿ ಇವರ ಪತಿ ಡಾಕ್ಟರ್ ಯು. ಪಿ. ಉಪಾಧ್ಯಾಯ ಇವರು ಸ್ಥಾಪಿಸಿದ “ರಾಗ ಧನ ಪಲ್ಲವಿ “ಪ್ರಶಸ್ತಿಯನ್ನು ಸ್ಥಳೀಯ ಪ್ರತಿಭಾವಂತ ಶಾಸ್ತ್ರೀಯ ಸಂಗೀತ ಸಾಧಕರಿಗೆ ರಾಗ ಧನ ಸಂಸ್ಥೆಯು ಪ್ರತಿ ವರ್ಷ ನೀಡುತ್ತಿದ್ದು, ಈ ವರ್ಷ ಪ್ರಶಸ್ತಿಯನ್ನು ಗಾಯಕಿ ವಿದುಷಿ ಶ್ರುತಿ ಭಟ್ ಅವರಿಗೆ ಫೆಬ್ರವರಿ 7 ರಂದು ಸಂಜೆ 5 ಗಂಟೆಗೆ ಎಂ. ಜಿ. ಎಂ. ನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿರುವ 37 ನೇಯ ಪುರಂದರ ದಾಸರು ಮತ್ತು ಸಂಗೀತ ತ್ರಿಮೂರ್ತಿ ಉತ್ಸವದ ಸಂದರ್ಭದಲ್ಲಿ ನೀಡಲಾಗುವುದು. ಖ್ಯಾತ ಹಿರಿಯ ಕೊಳಲು ವಿದ್ವಾಂಸ ಯು ರಾಘವೇಂದ್ರ ರಾವ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ನಂತರ ಶ್ರುತಿ ಎಸ್ ಭಟ್ ಅವರ ಸಂಗೀತ ಕಛೇರಿ ನಡೆಯಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ