Tuesday, April 7, 2026

spot_img

ಶ್ರೀಕೃಷ್ಣ ಮಠಕ್ಕೆ ನಟ ಸಂಪತ್ ಕುಮಾರ್ ಭೇಟಿ: ಪರ್ಯಾಯ ಸ್ವಾಮೀಜಿಯಿಂದ ಆಶೀರ್ವಾದ

ಉಡುಪಿ : ಬಹುಭಾಷಾ ಚಲನಚಿತ್ರ ನಟ ಹಾಗೂ ನಿರ್ದೇಶಕ ಸಂಪತ್ ಕುಮಾರ್ ಅವರು ಮಂಗಳವಾರ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆದರು. ಮಠಕ್ಕೆ ಆಗಮಿಸಿದ ಅವರು ಪೂಜಾ ವಿಧಿಗಳಲ್ಲಿ ಭಾಗವಹಿಸಿ, ದೇವರ ದರ್ಶನ ಪಡೆದ ಬಳಿಕ ಪರ್ಯಾಯ ಪೀಠಾಧೀಶರಾದ ಶ್ರೀ ಶೀರೂರು ಮಠದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಂದ ಫಲಮಂತ್ರಾಕ್ಷತೆ ಸ್ವೀಕರಿಸಿ ಆಶೀರ್ವಾದ ಪಡೆದರು.

ಈ ವೇಳೆ ಸ್ವಾಮೀಜಿಯವರೊಂದಿಗೆ ಸಂಕ್ಷಿಪ್ತವಾಗಿ ಮಾತುಕತೆ ನಡೆಸಿದ ಸಂಪತ್ ಕುಮಾರ್, ಮಠದ ವಾತಾವರಣದಲ್ಲಿ ಭಕ್ತರೊಂದಿಗೆ ಕೆಲಕಾಲ ಕಳೆದ ಅವರು, ಉಡುಪಿ ಶ್ರೀಕೃಷ್ಣ ಮಠದ ಶಿಸ್ತಿನ ಪೂಜಾ ಪರಂಪರೆ ಹಾಗೂ ಸಾಂಪ್ರದಾಯಿಕ ವೈಭವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶೀರೂರು ಮಠದ ದಿವಾನರಾದ ಉದಯ ಕುಮಾರ್ ಸರಳತ್ತಾಯ ಹಾಗೂ ಪಾರುಪತ್ಯೆಗಾರರಾದ ಶ್ರೀಶ ಭಟ್ ಕಡೇಕಾರು ಸೇರಿದಂತೆ ಮಠದ ಸಿಬ್ಬಂದಿ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles