ಶ್ರಾವಣ ಮಾಸವು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಮತ್ತು ಶುದ್ಧ ಮಾಸವಾಗಿ ಪರಿಗಣಿಸಲಾಗುತ್ತದೆ.
ಶ್ರಾವಣ ಮಾಸದಲ್ಲಿ ಬ್ರಹ್ಮಾಂಡದ ಶಕ್ತಿಗಳು ಪ್ರಬಲವಾಗಿರುವುದರಿಂದ ಜಪ, ತಪ, ಧ್ಯಾನ, ಅರ್ಚನೆಗಳು ಹೆಚ್ಚು ಫಲಕಾರಿಯಾಗುತ್ತವೆ.
ಉಪವಾಸ, ಏಕಭುಕ್ತ, ತಪಸ್ಸು ಇತ್ಯಾದಿ ಮಾಡಿದರೆ ಮನಸ್ಸು ಶಾಂತವಾಗುತ್ತದೆ ಮತ್ತು ಆತ್ಮಶುದ್ಧಿ ಸಾಧ್ಯ.
ಇಚ್ಛಾ ಶಕ್ತಿ (Will Power)
ಜ್ಞಾನ ಶಕ್ತಿ (Wisdom Power) ಮತ್ತು
ಕ್ರಿಯಾ ಶಕ್ತಿ (Action Power)
ಈ ಶಕ್ತಿಗಳನ್ನು ಜಾಗೃತಗೊಳಿಸಲು ಇದು ಉತ್ತಮ ಸಮಯ.
ಶ್ರಾವಣ ಪೌರ್ಣಮಿ ನಂತರ ಪಿತೃ ಧ್ಯಾನಕ್ಕೆ ಪ್ರಾರಂಭವಾಗುವ ಕಾಲ. ಪಿತೃಗಳ ತೃಪ್ತಿಗಾಗಿ ಜಪ-ತಪ-ಧರ್ಮ ಕಾರ್ಯಗಳು ಮಾಡುತ್ತಾರೆ.
ವೈಜ್ಞಾನಿಕವಾಗಿ ಹೇಳುವುದಾದರೆ
ಹೆಚ್ಚು ಮಳೆ ಇರುವುದರಿಂದ ಮಳೆಗಾಲದಲ್ಲಿ ಶರೀರದ ಜಠರಾಗ್ನಿ (digestive fire) ಕುಗ್ಗಿರುತ್ತೆ. ಅದಕ್ಕಾಗಿ ಉಪವಾಸ, ಕಡಿಮೆ ಆಹಾರ ಸೇವನೆ ಆರೋಗ್ಯಕರ ಮತ್ತು
ಈ ಸಮಯದಲ್ಲಿ ಜಲಮಾಲಿನ್ಯ ಹೆಚ್ಚಿರುವುದರಿಂದ ಸಾಂಕ್ರಾಮಿಕ ರೋಗಗಳು (Infectious Diseases) ಹರಡುವ ಸಾಧ್ಯತೆ ಹೆಚ್ಚು. ಈ ಕಾರಣದಿಂದಲೇ ಪವಿತ್ರ ಸ್ನಾನ, ನೈರ್ಮಲ್ಯ ಮತ್ತು ಹವನಗಳಿಂದ ವಾತಾವರಣ ಶುದ್ಧವಾಗುತ್ತದೆ.
ಹೆಚ್ಚಿನ ತೇವಾಂಶ (humidity) ಮಾನಸಿಕ ಅಶಾಂತಿಗೆ ಕಾರಣವಾಗಬಹುದು. ಧ್ಯಾನ, ಜಪ, ಪ್ರಾಣಾಯಾಮ ಇದನ್ನು ಕಡಿಮೆ ಮಾಡುತ್ತದೆ. ಈ ಸಮಯದಲ್ಲಿ ಸೂರ್ಯನ ಪ್ರಭಾವ ಕಡಿಮೆ ಇರುವುದರಿಂದ ಡಿಪ್ರೆಷನ್ ಅಥವಾ ಮಾನಸಿಕ ಕುಗ್ಗುವ ಭಾವನೆ ಹೆಚ್ಚಿರಬಹುದು. ಅದನ್ನು ನಾಶಮಾಡಲು ಭಕ್ತಿ, ಮಂತ್ರಧ್ವನಿ, ಧ್ಯಾನವು ಅತ್ಯಂತ ಪರಿಣಾಮಕಾರಿಯಾಗಿದೆ.
ಧಾರ್ಮಿಕವಾಗಿ ಶ್ರಾವಣ ಮಾಸವು ಶಿವಭಕ್ತಿಯ ಮಾಸ. ಸೋಮವಾರದಂದು “ಶ್ರಾವಣ ಸೋಮವಾರ ವ್ರತ” ಆಚರಿಸುತ್ತಾರೆ. ತಿರುಪತಿ ಶ್ರೀನಿವಾಸ ವ್ರತ, ನಂದಿ ವ್ರತ, ನಾಗರ ಪಂಚಮಿ, ವರಮಹಾಲಕ್ಷ್ಮಿ ವ್ರತ, ಶ್ರಾವಣ ಪೌರ್ಣಮಿ, ರಕ್ಷಾ ಬಂಧನ ಮುಂತಾದ ಹಬ್ಬಗಳು ಈ ತಿಂಗಳಲ್ಲಿ ಬರುತ್ತವೆ.ಗಂಗಾ, ಗೋದಾವರಿ, ಕಾವೇರಿ ಮುಂತಾದ ನದಿಗಳಲ್ಲಿ ಸ್ನಾನ ಮಾಡಿದರೆ ಪಾಪಕ್ಷಯವಾಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ಶಿವ, ವಿಷ್ಣು, ಮತ್ತು ದೇವತೆಗಳಿಗೆ ತುಳಸಿ ಮತ್ತು ಬೇಲದ ದಳ ಅರ್ಪಿಸುತ್ತಾರೆ.
ದೇವರ ಆರಾಧನೆ, ಉಪವಾಸ, ಹಬ್ಬಗಳು, ಪುಣ್ಯಕಾಲ, ಆಧ್ಯಾತ್ಮಿಕ ಆತ್ಮಶುದ್ಧಿ, ತಪಸ್ಸು, ಜಪ, ಧ್ಯಾನ ಮಾಡುವುದು ಅವಶ್ಯಕ.
ಇನ್ನು ಶ್ರಾವಣ ಮಾಸದಲ್ಲಿ ಭಕ್ತಿಯಿಂದ ಜೊತೆಗೆ ತಿಳಿವಳಿಕೆಯಿಂದ ಮಾಡಿದ ಕಾರ್ಯಗಳು ಆಧ್ಯಾತ್ಮಿಕ ಉನ್ನತಿ ಹಾಗೂ ದೈವಿಕ ಅನುಗ್ರಹವನ್ನು ಮತ್ತು ವೈಜ್ಞಾನಿಕ ಒಳಿತನ್ನು ಒದಗಿಸುತ್ತವೆ.
- Dharmasindhu Spiritual Life.
