ಉಡುಪಿ : ಭಾವೀ ಪರ್ಯಾಯ ಮಠಾಧೀಶರದ ಶೀರೂರು ಶ್ರೀ ಶ್ರೀ ವೇದವರ್ಧನತೀರ್ಥರ ಬೆಂಗಳೂರಿನ ವಿದ್ಯಾಪೀಠದಲ್ಲಿ ನಡೆಯುತ್ತಿರುವ 5 ನೇ ಚಾತುರ್ಮಾಸ್ಯದ ಸಂದರ್ಭದಲ್ಲಿ ಬಿಜೆಪಿ ಕರ್ನಾಟಕ ರಾಜ್ಯಾಧ್ಯಕ್ಷರಾದ ಬಿ. ವೈ. ವಿಜಯೇಂದ್ರ ಅವರು ಶ್ರೀಗಳನ್ನು ವಿದ್ಯಾಪೀಠದಲ್ಲಿ ಭೇಟಿ ಮಾಡಿದರು.

ಶ್ರೀಗಳು ಅವರನ್ನು ಮುಂದೆ 2026 ರ ಜನವರಿಯಲ್ಲಿ 18 ರಲ್ಲಿ ನಡೆಯಲಿರುವ ಪರ್ಯಾಯಕ್ಕೆ ಆಹ್ವಾನಿಸಿದರು. ಹಾಗೂ ತಮ್ಮ ಪರ್ಯಾಯದ ಕಾಲದಲ್ಲಿ ನಡೆಯಲಿರುವ ತಮ್ಮ ಯೋಜನೆಯಾದ ವೇದ ರಕ್ಷಣೆಯ ಸಲುವಾಗಿ ಹಾಗೂ ವೇದ ಪಂಡಿತರನ್ನು ಪೋಷಿಸುವ ಉದ್ದೇಶದಿಂದ ಶ್ರೀಕೃಷ್ಣ ಮಠದಲ್ಲಿ ನಿರಂತರ 2 ವರ್ಷ ನಡೆಯಲಿರುವ ಚತುರ್ವೇದ ಪಾರಾಯಣದ ಬಗ್ಗೆ ವಿವರಿಸಿದರು.

ಈ ಸಂದರ್ಭದಲ್ಲಿ ಮಠದ ಪಾರುಪತ್ಯಗಾರರಾದ ಶ್ರೀಶ ಭಟ್ ಕಡೆಕಾರ್. ಜಯನಗರ ಶಾಸಕರಾದ ರಾಮಮೂರ್ತಿ,ಬಸವನಗುಡಿ ಶಾಸಕರಾದ ರವಿ ಸುಬ್ರಹ್ಮಣ್ಯ ಹಾಗೂ ಬಸವನಗುಡಿ ಕಾರ್ಪೊರೇಟರ್ ವೆಂಕಟೇಶ್ ಉಪಸ್ಥಿತರಿದ್ದರು.
