Friday, July 4, 2025

spot_img

ಶಾಸಕ ಯಶ್ ಪಾಲ್ ಸುವರ್ಣ ನೇತೃತ್ವದಲ್ಲಿ ಬಂಕೇರಕಟ್ಟ ಸೇತುವೆ ಹೂಳು ತೆರವು

ಉಡುಪಿ : ಅಂಬಲಪಾಡಿ ಗ್ರಾಮ ಪಂಚಾಯತ್ ಹಾಗೂ ಕಲ್ಮಾಡಿ ನಗರಸಭಾ ವ್ಯಾಪ್ತಿಯ ಗಡು ಭಾಗದಲ್ಲಿರುವ ಬಂಕೇರಕಟ್ಟ ಸೇತುವೆಯ ಕೆಳಭಾಗದಲ್ಲಿ ಸಂಗ್ರಹವಾಗಿ ನೀರು ಸರಾಗ ಹರಿಯಲು ಅಡ್ಡಿಯಾಗಿದ್ದ ಹೂಳನ್ನು ಉಡುಪಿ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ನೇತೃತ್ವದಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಶ್ರಮದಾನ ನಡೆಸಿ ಹೂಳು, ಕಸ ಕಡ್ಡಿಗಳನ್ನು ತೆರವು ಮಾಡಲಾಯಿತು. ಹಲವಾರು ವರ್ಷಗಳಿಂದ ಸೂಕ್ತ ನಿರ್ವಹಣೆಯ ಕೊರತೆಯಿಂದ ತುಂಬಿದ್ದ ಹೂಳನ್ನು ಹಿಟಾಚಿ, ಜೆಸಿಬಿ ಯಂತ್ರಗಳನ್ನು ಬಳಸಿ ತೆರವು ಮಾಡಿ ಟಿಪ್ಪರ್ ವಾಹನದ ಮೂಲಕ ಸ್ಥಳಾಂತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಯಶ್ ಪಾಲ್ ಸುವರ್ಣ ಈ ಭಾಗದ ಜನತೆಯ ಬೇಡಿಕೆಯಂತೆ ಉದ್ಯಾವರದಿಂದ ಮಲ್ಪೆ ಭಾಗಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಸೇತುವೆಯಾಗಿರುವ ಬಂಕೇರಕಟ್ಟ ಸೇತುವೆಗೆ ಈಗಾಗಲೇ ಲೋಕೋಪಯೋಗಿ ಇಲಾಖೆಯ ಮೂಲಕ ನೂತನ ಸೇತುವೆ 5 ಕೋಟಿ ವೆಚ್ಚದಲ್ಲಿ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಶೀಘ್ರ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ ಎಂದರು.

ಈ ಸಂದರ್ಭದಲ್ಲಿ ಉಡುಪಿ ನಗರಸಭೆ ಅಧ್ಯಕ್ಷರಾದ ಶ್ರೀ ಪ್ರಭಾಕರ ಪೂಜಾರಿ, ನಗರಸಭೆ ಸದಸ್ಯರಾದ ಶ್ರೀ ಸುಂದರ ಕಲ್ಮಾಡಿ, ಅಂಬಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಜಾತ ಯೋಗೀಶ್, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ರಾಜೇಶ್ ಪೂಜಾರಿ, ಶ್ರೀ ಹರೀಶ್ ಪಾಲನ್, ಪಕ್ಷದ ಪ್ರಮುಖರಾದ ಶ್ರೀ ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಶ್ರೀ ಭುವನೇಂದ್ರ,‌ ಶ್ರೀ ಜಗದೀಶ್ ಕೋಟ್ಯಾನ್, ಶ್ರೀ ವಿವೇಕ್ ಕಲ್ಮಾಡಿ,‌‌‌‌ ಶ್ರೀ ಗಿರೀಶ್ ಅಮೀನ್, ಶ್ರೀ ರಾಮ್ ರಾಜ್ ಕಿದಿಯೂರು,‌ ಶ್ರೀ ಸದಾನಂದ ಜಿ ಕಾಂಚನ್, ಶ್ರೀ ಪಾಂಡು, ಶ್ರೀ ಸುಧಾಕರ್ ಪೂಜಾರಿ,‌‌ ಶ್ರೀ ನವೀನ್ ಸುವರ್ಣ,‌ ಶ್ರೀ ಶಿವಾಜಿ ಸನಿಲ್,‌‌ ಶ್ರೀ ವಿನಯ್ ಕಲ್ಮಾಡಿ, ಶ್ರೀ ಮಂಜು ಕೊಳ, ಶ್ರೀ ವಿಜಯ ಕುಂದರ್, ನವೀನ್ ಕಿದಿಯೂರು, ಶ್ರೀ ಸದಾನಂದ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles