ಉಡುಪಿ : ಉಡುಪಿಯ ಡಾ. ಟಿ. ಎಂ. ಎ. ಪೈ ಆಸ್ಪತ್ರೆಯಲ್ಲಿ ಮುಖ್ಯ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ, ಜನಾನುರಾಗಿಯಾಗಿದ್ದ, ಖ್ಯಾತ ವೈದ್ಯರಾದ ಡಾ. ಎನ್. ಜಿ. ಕೆ. ಶರ್ಮಾ ಇವರ ಕುರಿತ ‘ಶರ್ಮಾ ಜಿ ಔರ್ ಬೇಟಿ’ ಆಂಗ್ಲ ಪುಸ್ತಕದ ಬಿಡುಗಡೆ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಜರಗಿತು.
ಶರ್ಮಾರ ಪುತ್ರಿ ಶ್ರೀಮತಿ ರಾಧಿಕಾ ಆಚಾರ್ಯ ಇವರು ಬರೆದ ಪುಸ್ತಕವನ್ನು ದೃಶ್ಯ ಮತ್ತು ಪತ್ರಿಕಾ ವರದಿಗಾರ್ತಿಯಾಗಿ ಪ್ರಸಿದ್ಧಿ ಪಡೆದ ಬೆಂಗಳೂರಿನ ಶ್ರೀಮತಿ ವಸಂತಿ ಹರಿಪ್ರಕಾಶ್ ಅವರು ಬಿಡುಗಡೆಗೊಳಿಸಿದರು. ಗ್ರಾಹಕ ವೇದಿಕೆಯ ವರಿಷ್ಠರಾಗಿ ಸೇವೆಸಲ್ಲಿಸಿದ ಸಾಹಿತಿ ಶಾಂತರಾಜ್ ಐತಾಳ ಅವರು ಮುಖ್ಯ ಅತಿಥಿಗಳಾಗಿ ಭಾಗಿಯಾಗಿ ಮಾತನಾಡುತ್ತಾ, ರಾಧಿಕಾ ಆಚಾರ್ಯರ ಬರವಣಿಗೆಯ ಶೈಲಿ ಅಪೂರ್ವವಾದುದು. ಈಗಾಗಲೇ ನಾಲ್ಕು ಪುಸ್ತಕಗಳನ್ನು ಪ್ರಕಟಿಸಿದ ಇವರಿಂದ ಇನ್ನಷ್ಟು ಪುಸ್ತಕಗಳನ್ನು ಸಾಹಿತ್ಯ ಲೋಕಕ್ಕೆ ಅರ್ಪಣೆಯಾಗಲಿ ಎಂದು ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಡಾ. ಎನ್. ಜಿ. ಕೆ. ಶರ್ಮಾ ಮತ್ತು ಅವರ ಪತ್ನಿ ಶ್ರೀಮತಿ ಸರೋಜಿನಿ ಶರ್ಮಾ ಉಪಸ್ಥಿತರಿದ್ದರು.
ಶ್ರೀಮತಿ ಸುರೇಖಾ ಪುರಾಣಿಕ್ ಅತಿಥಿಗಳ ಪರಿಚಯ ಮಾಡಿದರು.ರಾಮಚಂದ್ರ ಆಚಾರ್ಯ ಸ್ವಾಗತಿಸಿದರು. ಅನಂತ ರಾವ್ ಕಾರ್ಯಕ್ರಮ ನಿರ್ವಹಿಸಿದರು, ರಾಧಿಕಾ ಆಚಾರ್ಯರು ಧನ್ಯವಾದ ಸಲ್ಲಿಸಿದರು.