ಉಡುಪಿ : ಮುಂಬೈನಲ್ಲಿ ಸಂಬಂಧಿಕರೊಂದಿಗೆ ವಾಸವಾಗಿದ್ದ ಯತಿರಾಜ (53) ಅವರು ನಾಪತ್ತೆಯಾಗಿರುವ ಕುರಿತು ಪ್ರಕರಣ ಬೆಳಕಿಗೆ ಬಂದಿದೆ. ತಂದೆ-ತಾಯಿ ಮೃತರಾದ ನಂತರ ಬೆಂಗಳೂರಿನಲ್ಲಿ ವಾಸವಿರುವುದಾಗಿ ದೂರವಾಣಿ ಮೂಲಕ ಮನೆಯವರಿಗೆ ತಿಳಿಸಿದ್ದ ಅವರು, ಆಗಾಗ ಸಂಪರ್ಕದಲ್ಲಿದ್ದರೂ ಕಳೆದ 4-5 ತಿಂಗಳಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಸಂಬಂಧಿಕರು ಹಾಗೂ ಬೆಂಗಳೂರಿನ ಪರಿಚಯಸ್ಥರಲ್ಲಿ ವಿಚಾರಣೆ ನಡೆಸಿದರೂ ಯತಿರಾಜ ಅವರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲವೆಂದು ತಿಳಿದುಬಂದಿದೆ. ನಾಪತ್ತೆಯಾದ ವ್ಯಕ್ತಿಯ ವಿವರಗಳು ಹೀಗಿವೆ: ಸುಮಾರು 5 ಅಡಿ 4 ಇಂಚು ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಕೋಲು ಮುಖ ಹೊಂದಿದ್ದಾರೆ.

ಸದರಿ ವ್ಯಕ್ತಿಯ ಕುರಿತು ಯಾವುದೇ ಮಾಹಿತಿ ದೊರೆತಲ್ಲಿ ಹಿರಿಯಡಕ ಪೊಲೀಸ್ ಠಾಣೆಯ ಪಿ.ಎಸ್.ಐ (ಮೊಬೈಲ್ ಸಂಖ್ಯೆ: 9480805452) ಅಥವಾ ಬ್ರಹ್ಮಾವರ ವೃತ್ತ ನಿರೀಕ್ಷಕರ ಕಚೇರಿ (ದೂರವಾಣಿ: 9480805432) ಸಂಪರ್ಕಿಸುವಂತೆ ಹಿರಿಯಡಕ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.



