ಕಾರ್ಕಳ : ಆನ್ಲೈನ್ ಗೇಮಿಂಗ್ ಆಡುವುದರ ಜೊತೆಗೆ ಇತರರಿಗೂ ಆಡುವಂತೆ ಆಪ್ ಇನ್ ಸ್ಟಾಲ್ ಮಾಡಿಕೊಡುತ್ತಿದ್ದಾತನನ್ನು ಕಾರ್ಕಳ ಪೊಲೀಸ್ ರು ಬಂಧಿಸಿದ್ದಾರೆ. ನಜೀರ್ (45) ಬಂಧಿತ ಆರೋಪಿ.

ಬೆಳ್ಮಣ್ ಗ್ರಾಮದಲ್ಲಿ ಆರೋಪಿ ಆನ್ಲೈನ್ ಗೇಮಿಂಗ್ ಆಟ ಆಡುತ್ತಾ, ಇತರರಿಗೆ ಆಡುವಂತೆ ಆಪ್ ಇನ್ ಸ್ಟಾಲ್ ಮಾಡಿಕೊಡುತ್ತಿದ್ದ ಎನ್ನುವ ಮಾಹಿತಿ ಮೇರೆಗೆ ಪೊಲೀಸ್‌ರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆರೋಪಿಯ ಮೊಬೈಲ್ ಪರಿಶೀಲನೆ ನಡೆಸಿದಾಗ ವೆಬ್ ಸೈಟ್ ಲಿಂಕ್ ಮತ್ತು ಆಪ್ ಬಳಸಿ ಆನ್ಲೈನ್ ಬೆಟ್ಟಿಂಗ್ ಆಡುತ್ತಿರುವುದು ಕಂಡುಬಂದಿದೆ. ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸ್ ರು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.