Wednesday, October 22, 2025

spot_img

ವೀರ ರಾಣಿ ಅಬ್ಬಕ್ಕ 500 ನೇ ಜನ್ಮ ಜಯಂತ್ಯೋತ್ಸವ: ಉಡುಪಿ ನಗರದಲ್ಲಿ ಭವ್ಯ ಶೋಭಯಾತ್ರೆ

ಉಡುಪಿ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ವತಿಯಿಂದ ವೀರ ರಾಣಿ ಅಬ್ಬಕ್ಕ ಅವರ 500 ನೇ ಜನ್ಮ ಜಯಂತ್ಯೋತ್ಸವ ಪ್ರಯುಕ್ತ ನಡೆಯುತ್ತಿರುವ ರಥಯಾತ್ರೆ ಯನ್ನು ಉಡುಪಿ ನಗರದಲ್ಲಿ ಭವ್ಯ ಶೋಭಯಾತ್ರೆಯ ಮೂಲಕ ರಥವನ್ನು ಸ್ವಾಗತಿಸಲಾಯಿತು. ಉಡುಪಿ ಪೂರ್ಣಪ್ರಜ್ಞ ಕಾಲೇಜಿನಿಂದ ಹೊರಟ ರಥಯಾತ್ರೆಯು ಕವಿ ಮುದ್ದಣ ಮಾರ್ಗವಾಗಿ ರಥಬೀದಿಯವರೆಗೆ ಸಾಗಿ ಬಂತು.

ಅಲ್ಲಿ ಆಯೋಜಿಸಲಾದ ಸಭಾ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದಂಗಳವರು ವೀರ ರಾಣಿ ಅಬ್ಬಕ್ಕ, ಇವರು ಭಾರತದ ಭವ್ಯ ಇತಿಹಾಸದಲ್ಲಿ ನೀಡಿರುವಂತಹ ಕೊಡುಗೆಗಳನ್ನು ಸ್ಮರಿಸುವುದರೊಂದಿಗೆ, ಇಂದಿನ ವಿದ್ಯಾರ್ಥಿಗಳು ಅವರ ಆದರ್ಶಗಳನ್ನು ಅಳವಡಿಸಿಕೊಳ್ಳುವುದು ಅನಿವಾರ್ಯ ಎನ್ನುವುದನ್ನು ಪುನರುಚ್ಚಿಸಿದರು.

ಈ ಸಂದರ್ಭದಲ್ಲಿ ನಗರದ ವಿಶೇಷ ಅತಿಥಿಯಾಗಿ ಭರತನಾಟ್ಯ ಕಲಾವಿದೆ,ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ  216 ಗಂಟೆಗಳ ಕಾಲ ನಿರಂತರ  ಭರತನಾಟ್ಯ ಪ್ರದರ್ಶನ ಮಾಡುವುದರ ಮೂಲಕ ವಿಶ್ವ ದಾಖಲೆಯನ್ನು ನಿರ್ಮಿಸಿದ ವಿದುಷಿ ದೀಕ್ಷಾ ವಿ ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ವಿಭಾಗ ಪ್ರಮುಖರಾದ ಕೇಶವ ಬಂಗೇರ, ವಿಭಾಗ ಸಂಚಾಲಕ್ ಸುವಿತ್ ಶೆಟ್ಟಿ, ಉಡುಪಿ ಜಿಲ್ಲಾ ಪ್ರಮುಖರಾದ ರಾಜಶಂಕರ್, ಉಡುಪಿ ತಾಲೂಕು ಸಂಚಾಲಕ್ ಮಾಣಿಕ್ಯ ಭಟ್, ಉಡುಪಿ ನಗರ ಸಂಘಟನಾ ಕಾರ್ಯದರ್ಶಿ ರೋಹಿತ್ ಮತ್ತು ಪ್ರಮುಖರಾದ ಶಿವನ್,  ಮನೀಶ್, ವಂಶಿತ್, ಭಾರ್ಗವ್, ಅನುಷಾ, ಸಂಜನಾ, ಪುಷ್ಪ , ವಿನೀತ್, ಧನುಷ್ ಸೇರಿದಂತೆ ಎಬಿವಿಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles