ಹೆಬ್ರಿ: ವಿಷದ ಹಾವು ಕಚ್ಚಿದ ಪರಿಣಾಮ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಹೆಬ್ರಿ ಬಳಿ ನಡೆದಿದೆ. ಮಗಳು ಸನ್ನಿಧಿ (8) ಹಾವು ಕಚ್ಚಿ ಮೃತಪಟ್ಟ ದುರ್ದೈವಿ ಬಾಲಕಿ. ಹೆಬ್ರಿ ಶೇಡಿಮನೆ ಗ್ರಾಮದ ಶ್ರೀಧರ ಎಂಬವರ ಮಗಳಾದ ಸನ್ನಿಧಿ, ಶಾಲೆಗೆ ರಜೆ ಇದ್ದ ಕಾರಣ ತಂದೆಯ ಜೊತೆ ತೋಟಕ್ಕೆ ತೆರಳಿದ್ದಾಳೆ. ಈ ಸಂದರ್ಭ ತೋಟದಲ್ಲಿದ್ದ ವಿಷಕಾರಿ ಹಾವು ಸನ್ನಿಧಿಗೆ ಕಚ್ಚಿತ್ತೆನ್ನಲಾಗಿದೆ. ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡ ಸನ್ನಧಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟಿದ್ದಾಳೆ.


