Monday, March 2, 2026

spot_img

ವಿಲ್ಸನ್ ಎಎಸ್‌ಎಗೆ 3ನೇ ಹಡಗು ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್‌ನಿಂದ ಲೋಕಾರ್ಪಣೆ

ಉಡುಪಿ : ಮಲ್ಪೆ ಬಂದರಿನಲ್ಲಿರುವ ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ವತಿಯಿಂದ ನಾರ್ವೆಯ ವಿಲ್ಸನ್ ಎಎಸ್‌ಎ ಕಂಪೆನಿಗೆ ನಿರ್ಮಿಸುತ್ತಿರುವ 3,800 ಟಿಡಿಡಬ್ಲ್ಯೂ ಸಾಮಾನ್ಯ ಸರಕು ಸಾಗಣೆ ಹಡಗುಗಳ ಸರಣಿಯ ಮೂರನೇ ಹಡಗನ್ನು ಶನಿವಾರ ಲೋಕಾರ್ಪಣೆ ನಡೆಯಿತು. ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಉಡುಪಿ ಶಿಪ್‌ಯಾರ್ಡ್ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಹಡಗನ್ನು ಅಧಿಕೃತವಾಗಿ ಜಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ನಾರ್ವೆಯ ಡ್ರೈ ಡಾಕ್ಸ್ ಆ್ಯಂಡ್ ಪ್ರೊಜೆಕ್ಟ್‌ನ ಫ್ಲೀಟ್ ಮೆನೇಜರ್ ಗೇರ್ ಓವೆಲಮ್ ಹಾಜರಿದ್ದರು.

ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್‌ನ ಮುಖ್ಯಕಾರ್ಯನಿರ್ವಹಣಾಧಿ ಕಾರಿ ಹರಿಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕ ವಾಗಿ ಮಾತನಾಡಿದರು. ಎಜಿಎಂ ಗೋಕುಲ್ ಪಿ.ಎನ್. ಶಿಪ್‌ನ ಕುರಿತು ಮಾಹಿತಿ ನೀಡಿದರು. ಮುಖ್ಯ ಆರ್ಥಿಕ ಅಧಿಕಾರಿ ಶಂಕರ್ ನಟರಾಜ್ ವಂದಿಸಿದರು. ಸವಿತಾ ಕಾರ್ಯಕ್ರಮ ನಿರೂಪಿಸಿದರು.

ಮೊದಲ ಹಡಗು ‘ವಿಲ್ಸನ್ ಇಕೋ-1’ ಕಳೆದ ಎಪ್ರಿಲ್ 23ರಂದು ಹಸ್ತಾಂತರಗೊಂಡು ಯುರೋಪಿನಲ್ಲಿ ಕಾರ್ಯಚರಿಸುತ್ತಿದೆ. ಈ ಹೊಸ ಶಿಪ್ 89.43 ಮೀಟರ್ ಉದ್ದ, 13.2 ಮೀಟರ್ ಅಗಲ ಹಾಗೂ 4.2 ಮೀಟರ್ ಆಳ ಹೊಂದಿದೆ. ನೆದರ್ಲ್ಯಾಂಡ್‌ನ ಕೋನೋಶಿಪ್ ಇಂಟರ್ನ್ಯಾಷನಲ್ ವಿನ್ಯಾಸಗೊಳಿಸಿದ ಈ ಶಿಪ್ ಯುರೋಪಿನ ಕರಾವಳಿ ನೀರಿನಲ್ಲಿ ಕಾರ್ಯನಿರ್ವಹಿಸಲು ಅನುಕೂಲವಾಗಿ  ನಿರ್ಮಿಸಲಾಗಿದೆ.

ಇನ್ನು ಇದರಲ್ಲಿ ಪರಿಸರ ಸ್ನೇಹಿ ಡೀಸೆಲ್-ಎಲೆಕ್ಟ್ರಿಕ್ ತಂತ್ರಜ್ಞಾನದಲ್ಲಿ ನಿರ್ಮಾಣಗೊಂಡಿದೆ. ಎರಡನೇ ಹಡಗು ‘ವಿಲ್ಸನ್ ಇಕೋ-2’ ಅಂತಿಮ ಹಂತದಲ್ಲಿದ್ದು, ಸೆಪ್ಟೆಂಬರ್‌ 11 ರಂದು ಹಸ್ತಾಂತರಕ್ಕೆ ಸಿದ್ಧವಾಗಲಿದೆ. ಈಗಾಗಲೇ ವಿಲ್ಸನ್ ಎಎಸ್‌ಎ, ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಜೊತೆ 6,300 ಟಿಡಿಡಬ್ಲ್ಯೂ ಸಾಮಾನ್ಯ ಸರಕು ಸಾಗಣೆಯ ಎಂಟು ಹಡಗುಗಳ ಫಾಲೋ-ಆನ್ ಆರ್ಡರ್ ಕೂಡ ಮಾಡಿಕೊಂಡಿದೆ. ಇದರಿಂದ ಉಡುಪಿ ಶಿಪ್‌ಯಾರ್ಡ್‌ನ ಅಂತಾರಾಷ್ಟ್ರೀಯ ಹೆಜ್ಜೆಗುರುತು ಇನ್ನಷ್ಟು ಬಲಗೊಂಡಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles