Thursday, October 23, 2025

spot_img

ವಿನೋದ್ ಕಾಂಬ್ಳಿ ಜೀವನ ಹೀಗೆ ಯಾಕೆ ? ಏನು?

ಈ ದಿನ ವಿನೋದ್ ಕಾಂಬ್ಳಿಯವರ ಜೀವನ ಚರಿತ್ರೆಯನ್ನು ನ್ಯೂಮೆರೊಲೊಜಿಯ ದೃಷ್ಟಿಕೋನದಲ್ಲಿ ನೋಡೋಣ , ಅವರ ಜೀವನದ ಏರಿಳಿತಗಳು, ಸಾಧನೆ ಮತ್ತು ಸ್ವಭಾವ , ಅರೋಗ್ಯ ಸಮಸ್ಯೆಗಳು, ವೈಯುಕ್ತಿಕ ಜೀವನದ ಏರಿಳಿತಗಳು , ಇದಕ್ಕೆಲ್ಲಾ ಏನು ಕಾರಣವಿರಬಹುದು ?

ವಿನೋದ್ ಕಾಂಬ್ಳಿ ಯವರ ಜನ್ಮದಿನ 18 – 01 -1972, 1 ಅಂದರೆ ಸೂರ್ಯ 8 ಅಂದರೆ ಶನಿ , ಅವರಿಬ್ಬರಲ್ಲೇ ಶತ್ರುತ್ವ ಇರುವುದರಿಂದ ಜೀವನದಲ್ಲಿ ಸಂಘರ್ಷಗಳು ಮತ್ತು ಕಾಂಟ್ರೊವರ್ಸಿ ಗಳು ಸುತ್ತಿಕೊಳ್ಳುತ್ತವೆ ಎಂದು ಸೂಚನೆ ಕೊಡುತ್ತದೆ, ಡ್ರೈವರ್ ನಂಬರ್ 1+8=9 ಅಂದರೆ ಮಂಗಳ / ಮಾರ್ಸ್, ಹಾಗೆಯೇ ಅವರ ಕಂಡಕ್ಟರ್ ನಂಬರ್ 1+8+1+1+9+7+2 = 29 = 2+9 = 11> 1+1 = 2 ಎರಡು ಬರುತ್ತದೆ , ಡ್ರೈವರ್ 9 ಮತ್ತು ಕಂಡಕ್ಟರ್ 2, ಮಾರ್ಸ್ ಅಥವಾ ಮಂಗಲನೆಂದರೆ ಬೆಂಕಿ ಮತ್ತು ಚಂದ್ರನೆಂದರೆ ನೀರು.  ಹಾಗು ಚಂದ್ರ ಮನಃ ಕಾರಕ, ಮಂಗಳನಿಗೂ ಚಂದ್ರನಿಗೂ ವೈರತ್ವವಿರುವುದರಿಂದ ಆಗಾಗ ಮಾನಸಿಕ ಕ್ಲೇಶಗಳು ತಲೆದೋರುವುದು ಸಾಮಾನ್ಯ , ಆದರೆ ಜನ್ಮದಿನಾಂಕದಲ್ಲಿ ನಂಬರ್ ಐದು ಇದ್ದಿದ್ದರೆ ಒಂದು ಹಂತದವರೆಗೆ ಎಲ್ಲವೂ ಸರಿದೂಗುತ್ತಿತ್ತು. ಐದು ಅಂದರೆ ಬುಧಗ್ರಹ ಅರ್ಥಾತ್ ಸಾಕ್ಷಾತ್ ವಿಷ್ಣುವಿನ ಅನುಗ್ರಹ , ಅದು ಇದ್ದಾಗ ವ್ಯಕ್ತಿಗೆ ಡಿವೈನ್ ಸ್ಪಿರಿಟ್ ಯಾವುದೊ ಒಂದು ರೀತಿಯಲ್ಲಿ ಮಾರ್ಗದರ್ಶನ ಕೊಟ್ಟು ಸರಿದಾರಿಯಲ್ಲಿ ನಡೆಸುತ್ತಿತ್ತು . ಆದರೆ ಇಲ್ಲಿ ಹಾಗಾಗದೆ . ನಂಬರ್ ಐದು ರ ಕೊರತೆಯಿಂದ ಮಂಗಳನ ದೆಸೆಯಲ್ಲಿ ಮಂಗಳ ಮತ್ತು ಚಂದ್ರ ಕ್ಲಾಷ್ ಆದಾಗ ಮಾನಸಿಕ ಖಾಯಿಲೆ ಉದ್ಭವವಾದರೆ ಅದರಿಂದ ರಿಕವರ್ ಆಗುವುದು ಕಷ್ಠಸಾಧ್ಯ ಎಂದು ಸೂಚಿಸುತ್ತದೆ.

ಮುಂಬೈ ನ ವಾಂಖಡೆ ಸ್ಟೇಡಿಯಂ ನಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಮ್ಯಾಚ್ ಆಡುವಾಗ ಕಾಂಬ್ಳಿಯವರಿಗೆ ಕೇತು ಮಹಾದೆಸೆ (ಕೇತು ಕ್ರೀಡೆಯನ್ನು ಪ್ರೋತ್ಸಾಹಿಸುತ್ತಾನೆ) ಹಾಗು ಬುಧ ಅಂತರ್ದೆಸೆ
(ಅಂದರೆ ಮಹಾವಿಷ್ಣುವಿನ ಅನುಗ್ರಹ ಆ ವರ್ಷದಲ್ಲಿ ಸ್ಥಿರತೆ ! ) , ಫೆಬ್ರವರಿ ತಿಂಗಳು ಕೂಡ ಕೇತು ವಿನ ಪ್ರಭಾವವಿದ್ದು 21,22,23 ತಾರೀಖಿನ ದಿನಗಳಲ್ಲಿ ಸೂರ್ಯ, ಚಂದ್ರ , ಹಾಗು ಗುರು ವಿನ ಅನುಗ್ರಹವಿದ್ದುದ್ದರಿಂದ . ಇವರಿಗೆ ಅಲ್ಲಿ 224 ರನ್ ದಾಖಲಿಸಲು ಸಾಧ್ಯವಾಯಿತು . .ಸಾಧನೆ, ಪರಿಶ್ರಮ ಜೊತೆಗೆ ಅದೃಷ್ಟ ಸೇರಿದಲ್ಲಿ ಮಾತ್ರವೆ ಜೀವನದಲ್ಲಿ ಮ್ಯಾಜಿಕ್ ಸಾಧ್ಯವಾಗುತ್ತದೆ!

ವಿವಾದಗಳು : 1996 ರ ವಿಶ್ವಕಪ್ ಪಂದ್ಯಾವಳಿಯಲ್ಲಿ, ಅವರು ಅಂದಿನ ನಾಯಕ ಮೊಹಮ್ಮದ್ ಅಜರುದ್ದೀನ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡಿದರು, ಆದರೆ ಈ ಆರೋಪ ಸಾಬೀತಾಗಿಲ್ಲ.
2015 ರಲ್ಲಿ, ತನ್ನ ಮನೆ ಕೆಲಸದಾಕೆಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಅವರನ್ನು ಬಂಧಿಸಲಾಯಿತು. ವಿನೋದ್ ಕಾಂಬ್ಳಿ ಮತ್ತು ಅವರ ಪತ್ನಿಯ ನಡುವೆ ಅನೇಕ ಬಾರಿ ಜಗಳಗಳು ನಡೆದಿವೆ ಮತ್ತು ಪತ್ನಿ ಅವರ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ದೂರು ದಾಖಲಿಸಿದ್ದರು. ಕಾಂಬ್ಳಿ ಅವರ ವಿವಾದಗಳು ಅವರ ಕ್ರಿಕೆಟ್ ವೃತ್ತಿಜೀವನದ ಮೇಲೆ ಮಾತ್ರವಲ್ಲದೆ, ಅವರ ವೈಯಕ್ತಿಕ ಜೀವನದ ಮೇಲೂ ಋಣಾತ್ಮಕ ಪರಿಣಾಮ ಬೀರಿದವು. ಕಾಂಬ್ಳಿ ಮತ್ತು ಸಚಿನ್ ತೆಂಡೂಲ್ಕರ್ ಬಾಲ್ಯದ ಗೆಳೆಯರಾಗಿದ್ದರು, ಆದರೆ ಕಾಂಬ್ಳಿ ಅವರ ವಿವಾದಗಳಿಂದಾಗಿ ಇಬ್ಬರ ನಡುವಿನ ಸಂಬಂಧಹದಗೆಟ್ಟಿತು.

ಧರ್ಮ ಪರಿವರ್ತನೆ : 2010 ರಲ್ಲಿ ಇವರು ಕ್ರಿಶ್ಚಿಯಾನಿಟಿ ಧರ್ಮವನ್ನು ಸ್ವೀಕರಿಸಿದರು

ಮಂಗಳ ಮತ್ತು ಚಂದ್ರ :ಅವರಿಗೆ ಬ್ರೈನ್ ನಲ್ಲಿ ಬ್ಲಡ್ ಕ್ಲೋಟಿಂಗ್ / ರಕ್ತ ಹೆಪ್ಪುಗಟ್ಟುವಿಕೆಯಿಂದ ಮಾನಸಿಕ ಅಸ್ವಸ್ಥರಾದದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರತಿಯೊಬ್ಬ ಮನುಷ್ಯ ತನ್ನ ಪೂರ್ವಾರ್ಜಿತ ಕರ್ಮಗಳನ್ನು ಸರಿಪಡಿಕೊಳ್ಳಲೆಂದೇ ಪ್ರಸ್ತುತ ಜನ್ಮವನ್ನು ಪಡೆದಿರುತ್ತಾನೆ , ಹುಟ್ಟಿದ ದಿನ ಮತ್ತು ಭಾಗ್ಯಗಳು ಹೇಗೇ ಇದ್ದರೂ ಅದನ್ನು ಅರ್ಥೈಸಿ ಅದರ ಪ್ರಕಾರ ಜೀವನ ನಡೆಸಿದಲ್ಲಿ ಬದುಕಿಗೆ ಸಾರ್ಥಕತೆ ಬರುತ್ತದೆ ,
ನಮ್ಮ ಇಹ ಜನ್ಮದ ಕರ್ಮಗಳು ಒಳ್ಳೆಯದಿದ್ದಲ್ಲಿ ಜೊತೆಗೆ ಪಿತೃಗಳ ಆಶೀರ್ವಾದವಿದ್ದಲ್ಲಿ ಮತ್ತು ಗುರುವಿನ ಅಭಯವಿದ್ದಲ್ಲಿ
ಮಾತ್ರ ಅವನು ಧಾರ್ಮಿಕತೆ ಮತ್ತು ಅಧ್ಯಾತ್ಮಕ್ಕೆ ಅಂಟಿಕೊಳ್ಳುತ್ತಾನೆ ಆಗಲೇ ಮುಂದಿನ ಬದುಕನ್ನು ಹೇಗೆ ಜೀವಿಸಬೇಕು ಎಂದು ಅರ್ಥೈಸಿಕೊಳ್ಳುವಷ್ಟು ಜ್ಞಾನೋದಯವಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ನಡೆದಲ್ಲಿ ಪರಿಣಾಮ ಕೂಡಾ ಅಷ್ಟು ಒಳ್ಳೆಯದಿರುವುದಿಲ್ಲ.

ನಿಮ್ಮ ಜನ್ಮದಿನಾಂಕವು ಕೂಡಾ ಸೇಮ್ ಆಗಿದ್ರೆ ಅಥವಾ ಡ್ರೈವರ್ ಕಂಡಕ್ಟರ್ ಸೇಮ್ ಆಗಿದ್ರೆ . ಖಂಡಿತ ಭಯಪಡುವ ಅಗತ್ಯವಿಲ್ಲ, ಭಗವಂತನ ಮೇಲೆ ನಂಬಿಕೆಯಿಟ್ಟು ಸಂಬಂದಿಸಿದ ಪರಿಹಾರಗಳನ್ನು ಮಾಡಿದಾಗ ಖಂಡಿತವಾಗಿಯೂ ಜೀವನ ಸುಖದ ಹಾದಿಯಲ್ಲಿ ಸಾಗುತ್ತದೆ. ಸಂಖ್ಯಾಶಾಸ್ತ್ರವು ನಮ್ಮ ವ್ಯಕ್ತಿತ್ವದ ಸ್ಟ್ರೆಂಗ್ತ್ ಮತ್ತು ವೀಕ್ನೆಸ್ಸ್ ಎರಡನ್ನು ತೋರಿಸುವುದರಿಂದ, ಮಾರ್ಗದರ್ಶನದಂತೆ ನಡೆದಾಗ ಜೀವನದಲ್ಲಿ ಸಫಲತೆ ಖಂಡಿತ ಸಿಗುತ್ತದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles