Monday, March 2, 2026

spot_img

ವಿದ್ಯಾ ಅಕಾಡೆಮಿ ಮೂಡ್ಲಕಟ್ಟೆಯಲ್ಲಿ ಹೃದಯಸ್ಪರ್ಶಿ ಅಜ್ಜ ಅಜ್ಜಿಯರ ದಿನ

ಕುಂದಾಪುರ : ಕುಂದಾಪುರ ಮೂಡ್ಲಕಟ್ಟೆ ವಿದ್ಯಾ ಅಕಾಡೆಮಿಯಲ್ಲಿ ಅಜ್ಜ-ಅಜ್ಜಿಯರ ದಿನವನ್ನು ಹೃದಯಸ್ಪರ್ಶಿಯಾಗಿ ಆಚರಿಸಲಾಯಿತು. ಮಕ್ಕಳ ಜೀವನದ ಬೇರುಗಳಾದ ಅಜ್ಜ-ಅಜ್ಜಿಯಂದಿರಿಗೆ ಗೌರವ ಸಲ್ಲಿಸಲು ಮಕ್ಕಳೂ ಶಿಕ್ಷಕರೂ ಒಂದಾಗಿ ಸಿದ್ಧತೆ ನಡೆಸಿ, ಕಾರ್ಯಕ್ರಮ ಆಯೋಜಿಸಿದ್ದರು. ಶಾಲೆಯ ಆಡಳಿತಾಧಿಕಾರಿ ಶ್ರೀಮತಿ ಪಾವನಾ ಮಹೇಶ್ ಮಾತನಾಡಿ, ಅಜ್ಜ-ಅಜ್ಜಿ ಯವರು ಮಕ್ಕಳಿಗೆ ಸ್ನೇಹಿತರೂ, ಮಾರ್ಗದರ್ಶಕರೂ ಆಗಿದ್ದಾರೆ. ಅವರ ಪ್ರೀತಿ ಮತ್ತು ಜ್ಞಾನವನ್ನು ನಾವು ಪ್ರತಿದಿನವೂ ಗೌರವಿಸಬೇಕು ಎಂದರು.

 ಕಾರ್ಯಕ್ರಮದಲ್ಲಿ ಮಕ್ಕಳ ಮನೋರಂಜನೆಗಾಗಿ ಅಜ್ಜ-ಅಜ್ಜಿಯಂದಿರಿಗಾಗಿ ಹಾಸ್ಯಮಯ ಆಟಗಳು ಆಯೋಜಿಸಲಾಗಿತ್ತು. ಮಕ್ಕಳು ಹಾಡು, ನೃತ್ಯ, ಕವನ ಹಾಗೂ ಮನರಂಜನಾ ಕಾರ್ಯಕ್ರಮಗಳ ಮೂಲಕ ಅಜ್ಜ ಅಜ್ಜಿಯವರ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು. 

ಇದೇ ಕಾರ್ಯಕ್ರಮದಲ್ಲಿ ಕುಟುಂಬ ಮೌಲ್ಯಗಳ ಆಧಾರಿತ ನಾಟಕ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ಭಾಗಿಯಾದ ಹಲವರು ಅಜ್ಜ-ಅಜ್ಜಿಯಂದಿರಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು, ಅಲ್ಲಿ ಅಜ್ಜ-ಅಜ್ಜಿಯರಿಗೂ ಭಾಗವಹಿಸುವ ಅವಕಾಶ ಸಿಗಬೇಕು ಎಂದು ತಮ್ಮಸಂತೋಷ ಹಂಚಿಕೊಂಡರು. ಶ್ರೀಮತಿ ಸುನೀತಾ ಡಿ’ಸೋಜಾ ಸ್ವಾಗತಿಸಿದರು. ಪ್ರೀ-ಸ್ಕೂಲ್ ಸಂಯೋಜಕಿ ಶ್ರೀಮತಿ ರಶ್ಮಾ ಶೆಟ್ಟಿ ನಿರೂಪಿಸಿದರು. ವಿಧ್ಯಾಶ್ರೀ ಶೆಟ್ಟಿ ವಂದಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles