ಕುಂದಾಪುರ : ಕುಂದಾಪುರ ಮೂಡ್ಲಕಟ್ಟೆ ವಿದ್ಯಾ ಅಕಾಡೆಮಿಯಲ್ಲಿ ಶಿಕ್ಷಕರ ದಿನವನ್ನು ಭರ್ಜರಿಯಾಗಿ ಹಾಗೂ ಹರ್ಷೋಲ್ಲಾಸದಿಂದ ಆಚರಿಸಲಾಯಿತು. ವಿಶೇಷವಾಗಿ ಈ ಕಾರ್ಯಕ್ರಮವನ್ನು ಮಕ್ಕಳೇ ನಿರ್ವಹಿಸಿದರು. ವಿದ್ಯಾರ್ಥಿಗಳು ತಮ್ಮ ಪ್ರಿಯ ಶಿಕ್ಷಕರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಭಾಷಣಗಳನ್ನು ಮಾಡಿ, ಶಿಕ್ಷಕರ ಮಹತ್ವ ಮತ್ತು ಅವರ ಪಾತ್ರವನ್ನು ಹೊಗಳಿದರು.

ಮಕ್ಕಳು ಶಿಕ್ಷಕರಿಗಾಗಿ ವಿವಿಧ ಆಟಗಳನ್ನು ಏರ್ಪಡಿಸಿದ್ದು, ಹಾಸ್ಯ, ಹರ್ಷ ಹಾಗೂ ನೆನಪಿನ ಕ್ಷಣಗಳಿಂದ ದಿನವನ್ನು ವಿಶೇಷಗೊಳಿಸಿತು. ಐಎಂಜೆ ಸಂಸ್ಥೆಗಳ ಅಧ್ಯಕ್ಷ ಸಿಧಾರ್ಥ್ ಜೆ. ಶೆಟ್ಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲ ಶಿಕ್ಷಕರಿಗೂ ಹಾರ್ದಿಕ ಶುಭಾಶಯಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯೂ ಹಾಜರಿದ್ದರು. ಕಾರ್ಯಕ್ರಮದ ಅಂತ್ಯದಲ್ಲಿ ವಿದ್ಯಾರ್ಥಿಗಳು ಕೃತಜ್ಞತಾಪೂರ್ವಕ ಧನ್ಯವಾದಗಳನ್ನು ಅರ್ಪಿಸಿ, ತಮ್ಮ ಗುರುಗಳ ಬಗ್ಗೆ ಪ್ರೀತಿಯನ್ನು ವ್ಯಕ್ತಪಡಿಸಿದರು