ಕೋಟ : ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ನಿವಾಸಿಯಾದ ವಾಸುದೇವ ಭಟ್ ವೃತ್ತಿಯಲ್ಲಿ ಇಲೆಕ್ಟ್ರೀಷಿಯನ್ ಆಗಿದ್ದು, ಅವರ ಮಗನಾದ ವಿವೇಕ್ ಭಟ್ (19 ವರ್ಷ) ಎಂಟನೇ ತರಗತಿಗೆ ಹೋಗುವಾಗ 2018 ರಲ್ಲಿ ಲಿಂಪೋ ಬ್ಲಾಸ್ಟಿಕ್ ಲುಕೇಮಿಯ ಎನ್ನುವ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿದ್ದಾನೆ. ಮಂಗಳೂರು ಅತ್ತಾವರ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಸತತ ಮೂರುವರೆ ವರ್ಷದ ಚಿಕಿತ್ಸೆ ಪಡೆದು, ನಂತರ ಖಾಸಗಿಯಾಗಿ ಎಸ್.ಎಸ್.ಎಲ್ ಸಿ ಮಗಿಸಿ, ಕೋಟ ವಿವೇಕ ವಿದ್ಯಾ ಸಂಸ್ಥೆಯಲ್ಲಿ ಪಿ.ಯು.ಸಿ ವಿದ್ಯಾಭ್ಯಾಸ ಮುಗಿಸಿ, ಪ್ರಸ್ತುತ ಬ್ರಹ್ಮಾವರ ಎಸ್.ಎಂ.ಎಸ್ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾನೆ.

ಆದರೆ ಸದ್ಯ 2025 ಏಪ್ರಿಲ್ ತಿಂಗಳಲ್ಲಿ ಪುನಃ ಅದೇ ರೀತಿ ಕಾಯಿಲೆ ಮರುಕಳಿಸಿದ್ದು, ಕಾಲೇಜಿಗೆ ಹೋಗುತ್ತಿದ್ದ ಹುಡುಗ ಈಗ ಆಸ್ಪತ್ರೆಗೆ ದಾಖಲಾಗಿದ್ದಾನೆ. ಆತನ ಚಿಕಿತ್ಸೆ ಗೆ 7 ಲಕ್ಷ ರೂಪಾಯಿಗಳ ಅವಶ್ಯಕತೆ ಇರುವುದರಿಂದ ಸ್ವಂತ ಮನೆ, ಜಾಗ, ಆಸ್ತಿ ಪಾಸ್ತಿ ಯಾವುದೂ ಇಲ್ಲದ ವಾಸುದೇವ ಭಟ್ರು ಮಗನ ಚಿಕಿತ್ಸೆ ಗೆ ಸಹೃದಯಿ ದಾನಿಗಳ ಆರ್ಥಿಕ ಸಹಾಯ ಸಹಕಾರವನ್ನು ಕೇಳುತ್ತಿದ್ದಾರೆ. ಸಹೃದಯಿ ಬಂಧುಗಳು ತಮ್ಮ ಕೈಯಲ್ಲಿ ಆದಷ್ಟು ಈ ಕೆಳಗಿನ ಬ್ಯಾಂಕ್ ಖಾತೆಗೆ ಹಣವನ್ನು ನೀಡಿ ಸಹಕರಿಸಬೇಕಾಗಿ ವಿನಂತಿ


