ಉಡುಪಿ : ನಿಟ್ಟೂರು ಪ್ರೌಢಶಾಲೆಯ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಪಿ.ಎಲ್. ಅಣ್ಣಾಜಿ ರಾವ್ ಸ್ಮರಣಾರ್ಥ ಅವರ ಸುಪುತ್ರ ಪಿ.ಎಲ್ ರಾವ್ ಇವರ ಪ್ರಾಯೋಜಕತ್ವದಲ್ಲಿ 40 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಹೆಗ್ಗುಂಜೆ ರಾಜೀವ ಶೆಟ್ಟಿ ವೇದಿಕೆಯಲ್ಲಿ ಜರಗಿತು.
ಕಳೆದ ಹಲವು ವರ್ಷಗಳಿಂದ ಶಾಲೆಯ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪಿ.ಎಲ್. ರಾವ್ ಧರ್ಮನಿಧಿಯಿಂದ ವಿದ್ಯಾರ್ಥಿವೇತನ ನೀಡುತ್ತಾ ಬಂದಿದ್ದು, ಶಾಲೆಯ ಹಳೆವಿದ್ಯಾರ್ಥಿ ಪಿ.ಎಲ್. ರಾವ್ ಹಾಗೂ ಆಡಳಿತ ಮಂಡಳಿಯ ಸದಸ್ಯ ಕೃಷ್ಣಮೂರ್ತಿ ಭಟ್, ಪುತ್ತೂರು ವಿದ್ಯಾರ್ಥಿವೇತನವನ್ನು ವಿತರಿಸಿದರು.
ನಿಟ್ಟೂರು ಎಜುಕೇಶನಲ್ ಸೊಸೈಟಿಯ ಕಾರ್ಯದರ್ಶಿ, ನಿಕಟಪೂರ್ವ ಮುಖ್ಯೋಪಾಧ್ಯಾಯ ಮುರಲಿ ಕಡೆಕಾರ್ ಪಿ.ಎಲ್. ಅಣ್ಣಾಜಿ ರಾವ್ ಧರ್ಮನಿಧಿಯ ಕುರಿತು ಮಾತನಾಡುತ್ತಾ ವಿದ್ಯಾರ್ಥಿಗಳು ಈ ಧನ ಸಹಾಯವನ್ನು ತಮ್ಮ ಕಲಿಕೆಗೆ ಬಳಸಿಕೊಂಡು ಕಲಿಕೆಯಲ್ಲಿ ಉತ್ತಮ ಸಾಧನೆಯನ್ನು ಮಾಡಿ, ಈ ಋಣವನ್ನು ತೀರಿಸಬೇಕು ಎಂದರು.
ಶಿಕ್ಷಕರಾದ ರಾಮದಾಸ್ ನಾಯ್ಕ್, ನಮಿತಾಶ್ರೀ, ಸೀಮಾ ಕೆ., ಚಿನ್ನಮ್ಮ ಮತ್ತು ಪೋಷಕರು ಉಪಸ್ಥಿತರಿದ್ದರು ಮುಖ್ಯೋಪಾಧ್ಯಾಯಿನಿ ಅನಸೂಯ ಸ್ವಾಗತಿಸಿ, ವಂದಿಸಿದರು.