ಉಡುಪಿ : ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ವಿದ್ಯಾಪೋಷಕ್‌ನ ದ್ವಿತಿಯ ಪಿಯುಸಿ ಮುಗಿಸಿದ ವಿದ್ಯಾರ್ಥಿಗಳಿಗೆ ಒಂದು ದಿನದ ಶೈಕ್ಷಣಿಕ ಸಮಾಲೋಚನ ಶಿಬಿರ ಜರಗಿತು. ಅದಮಾರು ಎಜುಕೇಶನಲ್ ಕೌನ್ಸಿಲ್‌ನ ಗೌರವ ಆಡಳಿತಾಧಿಕಾರಿಗಳಾದ ಡಾ. ಎ. ಪಿ. ಭಟ್ ಹಾಗೂ ಸಂಸ್ಥೆಯ ಕೋಶಾಧಿಕಾರಿಯಾದ
ಪ್ರೊ. ಕೆ. ಸದಾಶಿವ ರಾವ್ ಅವರು ಶಿಬಿರವನ್ನು ಉದ್ಘಾಟಿಸಿ ಶುಭಹಾರೈಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ
ಭಾಗವಹಿಸಿದ್ದ ಖ್ಯಾತ ಲೆಕ್ಕಪರಿಶೋಧಕರಾದ ಗಿರಿಧರ್ ಕಾಮತ್ ಅವರು ವಾಣಿಜ್ಯ ವಿದ್ಯಾರ್ಥಿಗಳಿಗೆ ಸಿಎ ಬಗ್ಗೆಯೂ ಹಾಗೂ ವಿಜ್ಞಾನ ವಿದ್ಯಾರ್ಥಿಗಳಿಗೆ ತ್ರಿಶಾ ಪಿಯು ಕಾಲೇಜಿನ ಪ್ರಾಂಶುಪಾಲರಾದ ಹರಿಪ್ರಸಾದ್ ಅವರು ಸಿಇಟಿ ಬಗ್ಗೆ ತಿಳಿಸಿದರು.
ಶೈಕ್ಷಣಿಕ ಸಾಲದ ಬಗ್ಗೆ ಮಾಹಿತಿ ನೀಡಲು ಕೆನರಾಬ್ಯಾಂಕ್‌ನ ಅಧಿಕಾರಿಗಳಾದ ವಿದ್ಯಾಶ್ರೀ ಭಾಗವಹಿಸಿದ್ದರು. ಈ
ಸಂದರ್ಭದಲ್ಲಿ ದಾನಿಗಳಾದ ಅಮೇರಿಕಾದ ಎಸ್. ವಿ. ಆಚಾರ್ಯ, ಶ್ರೀಮತಿ ನಿರ್ಮಲಾ ಆಚಾರ್ಯ ಅವರನ್ನು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಶಾಲು, ಸ್ಮರಣಿಕೆಯೊಂದಿಗೆ ಗೌರವಿಸಿದರು. ಕಾರ್ಯದರ್ಶಿ ಮುರಲಿ
ಕಡೆಕಾರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರುಗಳಾದ ಎಸ್. ವಿ. ಭಟ್, ವಿ. ಜಿ. ಶೆಟ್ಟಿ, ಜತೆ
ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ, ಸದಸ್ಯರಾದ ಯು. ಎಸ್. ರಾಜಗೋಪಾಲ ಆಚಾರ್ಯ, ಅನಂತರಾಜ ಉಪಾಧ್ಯ, ಗಣಪತಿ ಭಟ್ ಉಪಸ್ಥಿತರಿದ್ದರು. 175 ವಿದ್ಯಾರ್ಥಿಗಳು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.