ಉಡುಪಿ: ಉಡುಪಿ ಶ್ರೀಕೃಷ್ಣ ಜನ್ಮಾಷ್ಟಮಿಯಲ್ಲಿ ಬಲು ವಿಶೇಷ ಎಂದರೆ ವಿಟ್ಲಪಿಂಡಿಯ ದಿನ ಕೃಷ್ಣ ಮಠದ ರಥ ಬೀದಿಯಲ್ಲಿ ಕಾಣಿಸಿಕೊಳ್ಳುವ ತರಹೇವಾರಿ ವೇಷಗಳು. ಅಂದ ಹಾಗೇ ಈ ಬಾರಿ ಉಡುಪಿ ವಿಟ್ಲ ಪಿಂಡಿಗೆ ಆರ್ ಸಿಬಿ ಕಪ್ತಾನ ವಿರಾಟ್ ಕೊಹ್ಲಿ, ಸ್ಫೋಟಕ ಬ್ಯಾಟರ್ ಕ್ರಿಸ್ ಗೇಲ್ ಮತ್ತು ಮಿ ನ್ಯಾಗ್ಸ್ ಖ್ಯಾತಿಯ ದಾನೀಶ ಸೇಠ್ ಆಗಮಿಸಿ ಹಬ್ಬ ಮೆರಗು ಹೆಚ್ಚಿಸಿದ್ದಾರೆ..!!

ಅಂದ ಹಾಗೇ ಉಡುಪಿ ಗೆ ಬಂದಿರುವುದು ಅಸಲಿ ಕ್ರಿಕೇಟ್ ಆಟಗಾರರಲ್ಲ, ವಿಟ್ಲಪಿಂಡಿಯ ಮೆರವಣಿಗೆ ಇನ್ನಷ್ಟು ಮೆರಗು ನೀಡುವ ನಿಟ್ಟಿನಲ್ಲಿ, ವಿರಾಟ್ ಕೊಹ್ಲಿ, ಕ್ರಿಸ್ ಗೇಲ್ ಮತ್ತು ಮಿ.ನ್ಯಾಗ್ ಹೋಲುವ ತದ್ರೂಪುಗಳು ಜನರ ಆಕರ್ಷಣೆ ಕಾರಣರಾದರು. ಅದರಲ್ಲೂ ಆರ್ ಸಿಬಿ ಜೆರ್ಸಿ ಧರಿಸಿ ಕಾಣಿಸಿಕೊಂಡ ಈ ಮೂವರನ್ನು ನೋಡಿ ನೆರೆದ ಭಕ್ತರು ಒಮ್ಮೆ ಅವಾಕ್ಕಾದಂತು ನಿಜ…