Saturday, July 26, 2025

spot_img

ವಿಕೇಂಡ್‌ ವಾಹನ ತಪಾಸಣೆ : 21 ವಾಹನಗಳ ಮೇಲೆ ಕ್ರಮ

ಉಡುಪಿ : ವಿಕೇಂಡ್‌ ವೇಳೆ ವಾಹನ ತಪಾಸಣೆ ನಡೆಸಿದ ಮಣಿಪಾಲ ಪೊಲೀಸ್‌ ರು 21 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಘಟನೆ ನಡೆದಿದೆ. ಶನಿವಾರ ರಾತ್ರಿ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  5 ಸ್ಥಳಗಳಲ್ಲಿ  ಉಡುಪಿ ಉಪವಿಭಾಗದ ಪೊಲೀಸರು ನಾಕಾ ಬಂದಿ ಹಾಕಿ  ವಾಹನಗಳ ದಿಢೀರ್ ವಿಶೇಷ ತಪಾಸಣೆ ಮಾಡಿದ್ದಾರೆ. ಈ ವೇಳೆ 18 ಕಾರುಗಳು ಮತ್ತು 3 ಬೈಕ್ ಗಳು ಸೇರಿದಂತೆ 21 ವಾಹನಗಳನ್ನು ವಶಪಡಿಸಿಕೊಂಡ ಪೊಲೀಸರು ಮಧ್ಯಪಾನ ಮಾಡಿ ವಾಹನ  ಚಲಾಯಿಸುತ್ತಿರುವವರನ್ನು ಪತ್ತೆ ಮಾಡಿ ಅವರ ವಿರುದ್ದ ವಿರುದ್ಧ ಮೋಟಾರು ವಾಹನ ಅಧಿನಿಯಮ ಪ್ರಕಾರ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ಮದ್ಯ ಸೇವಿಸಿ ವಾಹನ ಚಲಾವಣೆ ಮಾಡುವ ಪ್ರತಿಯೊಂದು ಪ್ರಕರಣಕ್ಕೆ ನ್ಯಾಯಲಯ ದಲ್ಲಿ ಕನಿಷ್ಠ 10,000 ರೂ ದಂಡ, ಅಜಾಗರೂಕತೆಯಿಂದ ವಾಹನ ಚಲಾಯಿಸಿ ಪೊಲೀಸರ ಸೂಚನೆ ಉಲ್ಲಂಘಿಸಿದ, ಮೂರು ಜನ ಸವಾರಿ ಮಾಡಿದ ಪ್ರಕರಣಗಳಲ್ಲಿ 10 ವಾಹನಗಳಿಗೆ  10,000 ರೂಪಾಯಿ ಸ್ಥಳ ದಂಡ ವಿಧಿಸಲಾಗಿದೆ. ಉಡುಪಿ ಪೊಲೀಸ್ ಅಧಿಕ್ಷಕರ ಸೂಚನೆ ಮೇರೆಗೆ ಉಡುಪಿ ಡಿ ವೈ ಎಸ್ ಪಿ,  ಮಣಿಪಾಲ ಪೊಲೀಸ್ ನಿರೀಕ್ಷಕರ ನೇತೃತ್ವದಲ್ಲಿ ಉಡುಪಿ ನಗರ, ಉಡುಪಿ ಸಂಚಾರ, ಮಲ್ಪೆ ಹಾಗೂ ಮಣಿಪಾಲ ಪೊಲೀಸರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು. ಇನ್ನು ಮುಂದೆಯೂ ಸಹ  ಮದ್ಯಪಾನವನ್ನು ಮಾಡಿ ವಾಹನವನ್ನು ಚಲಾಯಿಸುವವರ ಹಾಗೂ ಅತಿ ವೇಗ ಹಾಗೂ ಅಜಾಗರೂಕತೆಯಿಂದ   ವಾಹನ ಚಲಾಯಿಸುವವರ ವಿರುದ್ಧ ಕಾರ್ಯಾಚರಣೆ ಮುಂದುವರಿಯಲಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles