Friday, June 27, 2025

spot_img

ರೈಲು ಢಿಕ್ಕಿ ಯುವಕ ಸಾವು…

ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ಸಮೀಪ ರೈಲು ಢಿಕ್ಕಿ ಹೊಡೆದ ಪರಿಣಾಮ ಯುವಕರ್ನೋವ ಮೃತಪಟ್ಟ ಘಟನೆ ಕಿರಿಮಂಜೆಶ್ವರ ಗ್ರಾಮದ ನಾಗೂರು ಶೆಟ್ರಹಿತ್ಲುನಲ್ಲಿ ನಡೆದಿದೆ. ಮೃತರನ್ನು ಬಿಜೂರು ಗ್ರಾಮದ ವಾಸುದೇವ ದೇವಾಡಿಗ (25) ಎಂದು ಗುರುತಿಸಲಾಗಿದೆ. ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ವಾಸುದೇವ ಸುಮಾರು ಐದು ಎಕರೆ ಭೂಮಿಯಲ್ಲಿ ಕಲ್ಲಂಗಡಿ ಬೆಳೆಯುತ್ತಿದ್ದರು ಮತ್ತು ಸುಗ್ಗಿಯ ತಯಾರಿ ನಡೆಸುತ್ತಿದ್ದರು. ಆ ದಿನದಂದು, ಅವರು ನಾಗೂರಿನಲ್ಲಿ ತನ್ನ ಕೆಲಸವನ್ನು ಮುಗಿಸಿ ಮನೆಗೆ ಮರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಕೊಂಕಣ ರೈಲು ಹಳಿಯನ್ನು ದಾಟುತ್ತಿರುದಾಗ ಮಂಗಳೂರು ಕಡೆಯಿಂದ ಮಡಗಾಂವ್ ಕಡೆಗೆ ಚಲಿಸುತ್ತಿದ್ದ ರೈಲು ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ವಾಸುದೇವ ಸ್ಥಳದಲ್ಲಿಯೇ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಕುರಿತು ಬೈಂದೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles