ಕುಂದಾಪುರ: ಕುಂದಾಪುರ ನಗರದ ಹೃದಯ ಭಾಗದಲ್ಲಿರುವ ಶಾಸ್ತ್ರಿ ಸರ್ಕಲ್ಲಿನ ರಿಕ್ಷಾ ನಿಲ್ದಾಣಕ್ಕೆ ದಾನಿಗಳು ಹಾಗೂ ಶಾಸಕರ ಅನುದಾನದಿಂದ ಹಾಕಲಾದ ಮೇಲ್ಛಾವಣಿಯನ್ನು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ ಕಿರಣ್ ಕುಮಾರ್ ಕೊಡ್ಗಿ ಹಾಗೂ ದಾನಿಗಳಾದ ರಾಜಾಜಿನಗರ ದಿನೇಶ್ ಪ್ರಿಂಟರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮಾಲಕರಾದ ದಿನೇಶ್ ಶೇರೆಗಾರ್ ಬೆಂಗಳೂರು ಇವರು ಜೊತೆಯಾಗಿ ಉದ್ಘಾಟಿಸಿದರು.

ಉದ್ಘಾಟನೆಯ ಬಳಿಕ ಮಾತನಾಡಿದ ಶಾಸಕ ಕಿರಣ್ ಕೊಡ್ಗಿ ಅವರು, ರಿಕ್ಷಾ ಚಾಲಕರು ಇದನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ತಿಳಿಸಿದರು. ಮುಂದಿನ ದಿನಗಳಲ್ಲಿ ರಿಕ್ಷಾ ಚಾಲಕರ ಲೈಟು ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ಶಾಸಕರ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ಪುರಸಭೆಯ ಅಧ್ಯಕ್ಷ ಮೋಹನ್ ದಾಸ್ ಶೆಣೈ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕುಂದಾಪುರ ಪುರಸಭಾ ಉಪಾಧ್ಯಕ್ಷೆ ಶ್ರೀಮತಿ ವನಿತಾ ಬಿಲ್ಲವ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ ವಿ, ಸದಸ್ಯರಾದ ಶೇಖರ್ ಪೂಜಾರಿ, ಅಶ್ವಿನಿ ಪ್ರದೀಪ್, ಪ್ರಭಾವತಿ ಶೆಟ್ಟಿ, ಶ್ರೀಧರ್ ಶೇರಿಗಾರ್, ಸಂತೋಷ್ ಶೆಟ್ಟಿ, ಪುರಸಭಾ ಇಂಜಿನಿಯರ್ ಗುರುಪ್ರಸಾದ್, ಕುಮಾರಿ ಮೇಘನಾ, ಗಣೇಶ್ ಜನ್ನಾಡಿ, ಹಾಗೂ ಪುರಸಭಾ ನಾಮನಿರ್ದೇಶಕ ಸದಸ್ಯರು ವಿವಿಧ ಪಕ್ಷದ ಮುಖಂಡರು, ನಿಲ್ದಾಣದ ಆಟೋ ಚಾಲಕರು ಮತ್ತು ನಾಗರಿಕರು ಉಪಸ್ಥಿತರಿದ್ದರು.
