Tuesday, July 29, 2025

spot_img

ರಾತ್ರಿ ವೇಳೆ ದನಗಳ್ಳತನ: ಇಬ್ಬರು ದನಗಳ್ಳರ ಸೆರೆ…

ಉಡುಪಿ : ಇತ್ತೀಚೆಗೆ ರಾತ್ರಿ ವೇಳೆ ದನಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕಾರ್ಯಾಚರಣೆಗೆ ಇಳಿದ ಗಂಗೊಳ್ಳಿ ಪೊಲೀಸ್‌ ರು ಇಬ್ಬರು ದನಗಳ್ಳರನ್ನು ಹೆಡೆಮುರಿ ಕಟ್ಟಿದ್ದಾರೆ. ಬ್ರಹ್ಮಾವರ ಹೊನ್ನಾಳ ಮೂಲದ ನೌಫಲ (23) ಮತ್ತು ಗುಲ್ವಾಡಿ ಮಾವಿನಕಟೆ ನಿವಾಸಿ ನಿಶಾದ್‌ (23) ಬಂಧಿತ ಆರೋಪಿಗಳು.

ಜುಲೈ 6ರಂದು ಮುಂಜಾನೆ ವೇಳೆ ಸುಮಾರು 4 ಗಂಟೆಗೆ ನಾಡಾ ಗ್ರಾಮ ಪಂಚಾಯತ್‌ ಸಮೀಪ ಒಂದು ಬಿಳಿ ಬಣ್ಣದ ಕಾರಿನಲ್ಲಿ ಮೂರು ಜನರು ಬಂದು ಶಾನ್‌ ಮೆಡಿಕಲ್‌ ಪಕ್ಕದಲ್ಲಿ ಮಲಗಿರುವ ದನಗಳನ್ನು ಕಾರಿಗೆ ತುಂಬಲು ಪ್ರಯತ್ನಿಸಿದ್ದಾರೆ. ಅದೇ ಸಮಯದಲ್ಲಿ ದಾರಿಯಲ್ಲಿ ಹೋಗುತ್ತಿದ್ದ ವಾಹನವನ್ನು ನೋಡಿ ದನವನ್ನು ತುಂಬಿಸಲು ಪ್ರಯತ್ನಿಸಿದವರು ಓಡಿ ಹೋಗಿದ್ದಾರೆ. ಸದ್ಯ ಇದೇ ಪ್ರಕರಣವನ್ನು ಬೆನ್ನು ಹತ್ತಿ ತನಿಖೆ ನಡೆಸಿ ಪೊಲೀಸ್‌ರು ಪ್ರಕರಣ ಪ್ರಮುಖ ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದಲ್ಲಿ ಕೃತ್ಯಕ್ಕೆ ಬಳಸಿದ 5 ಲಕ್ಷ ಮೌಲ್ಯದ ಬಿಳಿ ಬಣ್ಣದ ಸ್ವೀಪ್ಟ್‌ ಕಾರ್‌ ಹಾಗೂ 2 ಮೊಬೈಲ್‌ ಪೋನ್ ಗಳನ್ನು ಪೊಲೀಸ್‌ ರು ಸ್ವಾದೀನಪಡಿಸಿಕೊಂಡಿದ್ದಾರೆ. ಈ ಕುರಿರು ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ..

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles