ಉಡುಪಿ : ರಾಜ್ಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷರು, ಯಕ್ಷಗಾನದ ಮಹಾಪೋಷಕರೂ ಆದ ಡಾ. ಟಿ. ಶ್ಯಾಮ್ ಭಟ್ ಸಂಸ್ಥೆಯ ಐವೈಸಿ ಸಭಾಂಗಣ ಹಾಗೂ ಕಟ್ಟಡ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು. ಮೊದಲ ಬಾರಿಗೆ ನೂತನ ಕಟ್ಟಡಕ್ಕೆ ಭೇಟಿ ನೀಡಿದ ಡಾ. ಶ್ಯಾಮ್ ಭಟ್ಟರನ್ನು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಶಾಲು, ಸ್ಮರಣಿಕೆಯೊಂದಿಗೆ ಗೌರವಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಸಂಸ್ಥೆಯ ಕಾರ್ಯಚಟುವಟಿಕೆ ಪರಿಚಯಿಸಿದರು.

ಎಲ್ಲವನ್ನೂ ಆಲಿಸಿ, ಸಂಸ್ಥೆಯ ಪಾರದರ್ಶಕ ವ್ಯವಹಾರ, ಕಾರ್ಯಕರ್ತರ ಅರ್ಪಣಾ ಮನೋಭಾವಕ್ಕೆ ಸಂದ ಪುರಸ್ಕಾರ ಈ ಕಟ್ಟಡ, ನಿಮ್ಮ ಸಮಾಜ ಸೇವೆ ಹೀಗೇ ಮುಂದುವರಿಯಲೆಂದು ಶುಭಕೋರಿ ರೂಪಾಯಿ ಹತ್ತು ಲಕ್ಷದ ದೇಣಿಗೆ ತಮ್ಮ ಪ್ರತಿಷ್ಠಾನದಿಂದ ನೀಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಎಸ್. ವಿ. ಭಟ್, ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್, ಜತೆ ಕಾರ್ಯದರ್ಶಿಗಳಾದ ನಾರಾಯಣ. ಎಂ. ಹೆಗಡೆ, ವಿದ್ಯಾ ಪ್ರಸಾದ್, ಸದಸ್ಯರಾದ ಅನಂತರಾಜ ಉಪಾಧ್ಯ, ನಟರಾಜ ಉಪಾಧ್ಯ, ಕಿಶೋರ್. ಸಿ. ಉದ್ಯಾವರ ಹಾಗೂ ಭಾರತಿ ಮೋಟರ್ಸ್ನ ಮಾಲಕರಾದ ರಾಘವೇಂದ್ರ ಭಟ್ ಉಪಸ್ಥಿತರಿದ್ದರು.