Friday, July 4, 2025

spot_img

ರಾಜ್ಯ ಪೊಲೀಸ್ ದೂರು ಪ್ರಾಧಿಕಾರದಿಂದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರಿಗೆ ನೊಟೀಸ್ ಜಾರಿ !?

ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಬ್ದುಲ್ ರೆಹಮಾನ್ ಇವರ ಹತ್ಯೆಯ ನಂತರ, ತನಿಖೆಯ ನೆಪದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು, ಮೇ ತಿಂಗಳಿನಲ್ಲಿ ಕಡಬ, ಉಜಿರೆ, ಸುಳ್ಯ ಈ ಠಾಣಾ ವ್ಯಾಪ್ತಿಯಲ್ಲಿನ ಅಮಾಯಕ ಹಿಂದೂಗಳ ಮನೆಗಳಿಗೆ ರಾತ್ರೋರಾತ್ರಿ ಹೋಗಿ ಕಿರುಕುಳ ನೀಡಿದ ಪ್ರಕರಣದಲ್ಲಿ ಇಂದು, 17 ಜೂನ್ ರಂದು ರಾಜ್ಯ ಪೊಲೀಸ್ ದೂರು ಪ್ರಾಧಿಕಾರದಲ್ಲಿ ವಿಚಾರಣೆ ನಡೆಯಿತು. ರಾಜ್ಯ ಪೋಲಿಸ್ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾಯಮೂರ್ತಿ ಕೆ.ಎನ್ ಸುಧೀಂದ್ರರಾವ್ ವಿಚಾರಣೆ ನಡೆಸಿ, ಅಮಾಯಕ ಹಿಂದೂಗಳಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಗಳಿಗೆ ನೊಟೀಸ್ ಹೊರಡಿಸಿದರು. ಮುಂದಿನ ವಿಚಾರಣೆ ಜುಲೈ 15 ರಂದು ನಡೆಯ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಸ್ತ ಹಿಂದೂ ಸಂಘಟನೆಗಳು ಒಟ್ಟಾಗಿ ರಾಜ್ಯವ್ಯಾಪಿ ಕಾನೂನು ಹೋರಾಟ ಪ್ರಾರಂಭಿಸಿದ್ದರು. ಜೂನ್ 4, 2025 ರಂದು ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ನೇತೃತ್ವದಲ್ಲಿ ಬೆಂಗಳೂರಿನ ಪೊಲೀಸ್ ದೂರು ಪ್ರಾಧಿಕಾರದ ಅಧ್ಯಕ್ಷರಾದ ಸನ್ಮಾನ್ಯ ನ್ಯಾಯಮೂರ್ತಿ ಎನ್. ಕೆ. ಸುಧೀಂದ್ರ ರಾವ್ ಇವರಿಗೆ ದೂರು ನೀಡಲಾಗಿತ್ತು. ಈ ವೇಳೆ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಮೋಹನ ಗೌಡ, ಕರ್ನಾಟಕ ಉಚ್ಛ ನ್ಯಾಯಾಲಯದ ಹಿರಿಯ ವಕೀಲರಾದ ನ್ಯಾಯವಾದಿ ಅಮೃತೇಶ್ ಎನ್ ಪಿ, ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿ ಸೇರಿದಂತೆ ಅನೇಕ ವಕೀಲರು ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು. ಅಷ್ಟೇ ಅಲ್ಲದೇ ಎಲ್ಲ ಹಿಂದೂ ಸಂಘಟನೆಗಳು ಸೇರಿ ಈ ವಿಷಯವಾಗಿ ರಾಜ್ಯದ ವಿಜಯಪುರ, ಹುಬ್ಬಳ್ಳಿ, ಕಾರವಾರ, ಶಿವಮೊಗ್ಗ, ಹಾಸನ, ಉಡುಪಿ ಮತ್ತು ಮಂಗಳೂರಿನಲ್ಲಿ ಸಹ ಅಲ್ಲಿನ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ರಾಜ್ಯಪಾಲರಿಗೆ ಪೊಲೀಸರ ಈ ತಾರತಮ್ಯದ ಕೃತ್ಯ ಕೂಡಲೇ ನಿಲ್ಲಬೇಕೆಂದು ಮನವಿ ಮಾಡಲಾಗಿತ್ತು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles