ಉಡುಪಿ: ಮನಸ್ಸಿನಲ್ಲಿ ಆಲೋಚನೆ ಸ್ಪಷ್ಟವಾಗಿದ್ದಾಗ ಗುರಿ ಮುಟ್ಟುವುದಕ್ಕೆ ಸಾಧ್ಯ ಎಂದು ಅದಮಾರು ಮಠ ಶಿಕ್ಷಣ ಮಂಡಳಿಯ ಅಧ್ಯಕ್ಷ ಶ್ರೀ ಈಶಪ್ರಿಯತೀರ್ಥರು ಹೇಳಿದರು. ಪೂರ್ಣಪ್ರಜ್ಞ ಕಾಲೇಜು (ಸ್ವಾಯತ್ತ) ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಉಡುಪಿ ಇದರ ಅಶ್ರಯದಲ್ಲಿ ಎ. 21 & 22 ರಂದು ಆಯೋಜನೆಗೊಂಡಿರುವ ಎರಡು ದಿನಗಳ ರಾಜ್ಯಮಟ್ಟದ ಅಂತರ್ ಕಾಲೇಜು ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ‘ಪ್ರಜ್ಞಾ 2025’ ಸೋಮವಾರ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಡಾ ಜಿ. ಎಸ್ ಚಂದ್ರಶೇಖರ್, ಉಡುಪಿಯ ಪೂರ್ಣಪ್ರಜ್ಞ ಸಮೂಹ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕ ಡಾ.ಪಿ. ಶ್ರೀರಮಣ ಐತಾಳ್, ಪ್ರಾಂಶುಪಾಲ ಡಾ. ರಾಮು ಎಲ್, ಪ್ರಜ್ಞಾ ಉತ್ಸವದ ಮುಖ್ಯ ಸಂಯೋಜಕ ಡಾ.ಟಿ.ಎಸ್.ರಮೇಶ್, ಸಾಂಸ್ಕೃತಿಕ ಸಂಯೋಜಕ ಡಾ. ಮಂಜುನಾಥ ಕರಬ, ಪ್ರತಿಭಾ ಭಟ್, ಶೈಕ್ಷಣಿಕ ಸಂಯೋಜಕ ಪ್ರತಿಭಾ ಆಚಾರ್ಯ, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಹಅಧಿಕಾರಿ ಡಾ. ಸಂತೋಷ್ ಕುಮಾರ್, ಸುಮಲತಾ, ಐಕ್ಯುಎಸಿ ಸಂಯೋಜಕ ಡಾ. ವಿನಯ್ ಕುಮಾರ್, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಅಕ್ಷತಾ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಜಯಲಕ್ಷ್ಮೀ ಸ್ವಾಗತಿಸಿದರು. ವಿದ್ಯಾರ್ಥಿನಿ ಶ್ರೀರಕ್ಷಾ ಹೆಗಡೆ ಪ್ರಾರ್ಥಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಮುರಳಿ ಹಾಗೂ ಗಣಿತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರೀನಯನಾ ನಿರೂಪಿಸಿದರು. ಪ್ರಜ್ಞಾ ಉತ್ಸವದ ಶೈಕ್ಷಣಿಕ ಸಂಯೋಜಕ ಡಾ. ಆನಂದ ರಾಯಮಾನೆ ವಂದಿಸಿದರು.