Thursday, October 23, 2025

spot_img

ಮೊಸರು ಕುಡಿಕೆ

ದಹೀಕಾಲಾ :
ವಿವಿಧ ಖಾದ್ಯಪದಾರ್ಥಗಳು, ಮೊಸರು, ಹಾಲು ಮತ್ತು ಬೆಣ್ಣೆ ಇವುಗಳ ಮಿಶ್ರಣ ಮಾಡುವುದೇ ‘ಕಾಲಾ’. ಶ್ರೀಕೃಷ್ಣನು ವ್ರಜಮಂಡಲದಲ್ಲಿ ಗೋವುಗಳನ್ನು ಮೇಯಿಸುವಾಗ ಸ್ವಂತದ ಮತ್ತು ಇತರ ಮಿತ್ರರ ಬುತ್ತಿಗಳನ್ನು ಒಟ್ಟಿಗೆ ಕೂಡಿಸಿ ಆ ಖಾದ್ಯಪದಾರ್ಥಗಳ ‘ಕಾಲಾ’ ಮಾಡಿದನು ಮತ್ತು ಎಲ್ಲರೊಂದಿಗೆ ತಿಂದನು. ಈ ಕಥೆಗನುಸಾರ ಮುಂದೆ ಗೋಕುಲಾಷ್ಟಮಿಯ ಮರುದಿನ ಕಾಲಾವನ್ನು ಮಾಡುವ ಮತ್ತು ಮೊಸರು ಕುಡಿಕೆಯನ್ನು ಒಡೆಯುವ ರೂಢಿಯು ನಿರ್ಮಾಣವಾಯಿತು.

ಮೊಸರು ಕುಡಿಕೆಯ ವೈಶಿಷ್ಟ್ಯಗಳು :
ಗೋಪಾಲಕಾಲಾ : ಗೋಪಾಲಕಾಲಾ ಅಂದರೆ ಭಜನೆ ಆದ ನಂತರ ಅಥವಾ ಗೋಕುಲಾಷ್ಟಮಿಯ ನಂತರ ಮೊಸರು ಕುಡಿಕೆಯನ್ನು ಒಡೆದು ಗ್ರಹಿಸುವ ಪ್ರಸಾದ.

ಗೋಪಾಲಕಾಲಾದ ಸವಿರುಚಿ : ಅವಲಕ್ಕಿ, ಹಾಲು, ಮೊಸರು, ಮಜ್ಜಿಗೆ ಮತ್ತು ಬೆಣ್ಣೆ ಈ ಐದು ಪದಾರ್ಥಗಳನ್ನು ಒಟ್ಟು ಮಾಡಿ ತಯಾರಿಸುವ ಪ್ರಸಾದಕ್ಕೆ ಒಂದು ಬಣ್ಣಿಸಲಾಗದ ದಿವ್ಯ ರುಚಿ ಇರುತ್ತದೆ.

ಮೊಸರು ಕುಡಿಕೆ : ಮೊಸರು ಕುಡಿಕೆ ಅಂದರೆ ‘ಜೀವ’. ಮೊಸರು ಕುಡಿಕೆಯನ್ನು ಒಡೆಯುವುದು ಅಂದರೆ ದೇಹಬುದ್ಧಿಯನ್ನು ಬಿಟ್ಟು ಆತ್ಮಬುದ್ಧಿಯಲ್ಲಿ ಸ್ಥಿರವಾಗುವುದು. ಅದರ ನಂತರ ಸ್ವೀಕರಿಸುವ ಪ್ರಸಾದ ಆನಂದದ ಪ್ರತೀಕವಾಗಿದೆ.

ಮೊಸರು ಕುಡಿಕೆಯ ಪಾವಿತ್ರ್ಯವನ್ನು ಉಳಿಸಲು ಮುಂದಿನ ಕೃತಿಗಳನ್ನು ತಡೆಯಿರಿ !

1. ಲಕ್ಷಗಟ್ಟಲೆ ರೂಪಾಯಿಯ ಮೊಸರು ಕುಡಿಕೆ ಸ್ಪರ್ಧೆಗಳನ್ನು ಆಯೋಜಿಸಿ ಉತ್ಸವದ ವ್ಯಾಪಾರೀಕರಣ !
2. ಉತ್ಸವದಲ್ಲಿ ತಂಬಾಕು, ಗುಟ್ಕಾ ಇತ್ಯಾದಿಗಳ ಜಾಹಿರಾತುಗಳನ್ನು ಪ್ರದರ್ಶಿವುದು, ಅಥವಾ ಉತ್ಪಾದಕರನ್ನು ಪ್ರಾಯೋಜಕರೆಂದು ಕರೆತರುವುದು !
3. ಈ ಸಂದರ್ಭದಲ್ಲಿ ನಡೆಯುವ ಮದ್ಯಪಾನ, ವಿಕೃತ ನೃತ್ಯ, ಮಹಿಳೆಯರ ಶೋಷಣೆ, ರಾಸಾಯನಿಕ ಬಣ್ಣದ ನೀರನ್ನು ಎರಚುವುದು !
4. 40 ಅಡಿಗಿಂತ ಎತ್ತರದಲ್ಲಿ ಕಟ್ಟಿರುವ ಮೊಸರು ಕುಡಿಕೆ, ಅದನ್ನು ಒಡೆಯುವ ಪೈಪೋಟಿಯಲ್ಲಿ ಅಪಾಯಕಾರಿ ಮಾನವ ಗೋಪುರ ತಯಾರಿಸುವುದು !
5. ಮಹಿಳೆಯರು ಇರುವ ‘ಗೋವಿಂದಾ’ ತಂಡಗಳ ಅಶಾಸ್ತ್ರೀಯ ರೂಢಿ !

ಹಿಂದೂಗಳೇ, ಮೊಸರು ಕುಡಿಕೆಯಲ್ಲಿ ನಡೆಯುವ ತಪ್ಪು ಆಚರಣೆಗಳನ್ನು ತಡೆಯಲು ಮುಂದಿನ ಕೃತಿಗಳನ್ನು ಮಾಡಿ !

1. ಮಹಿಳೆಯರ ಕಿರುಕುಳ, ಜೂಜಾಡುವುದು, ಮದ್ಯಸೇವನೆ ಮುಂತಾದವುಗಳು ಕಂಡರೆ ಪೊಲೀಸರಲ್ಲಿ ದೂರು ನೋಂದಾಯಿಸಿ !
2. ಮೊಸರು ಕುಡಿಕೆಯ ಸ್ಪರ್ಧೆಗಳ ಆಯೋಜಕರನ್ನು ಭೇಟಿ ಮಾಡಿ ಅವರಿಗೆ ಪ್ರಬೋಧನೆ ಮಾಡಿ !

ಆಧಾರ : www.sanatan.org/kannada

– ಶ್ರೀ. ವಿನೋದ ಕಾಮತ, ವಕ್ತಾರರು, ಸನಾತನ ಸಂಸ್ಥೆ,

ಸಂಪರ್ಕ : 9342599299

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles