Wednesday, March 4, 2026

spot_img

ಮೊದಲು ಕೊರಗರಿಗೆ ಪೌಷ್ಟಿಕ ಶುಧ್ಧ ಆಹಾರ ನೀಡಿ ಶಾಸಕರೇ :ಶ್ಯಾಮರಾಜ್ ಬಿರ್ತಿ

ಉಡುಪಿ : ಈ ಸಮಾಜದ ಕಟ್ಟ ಕಡೆಯ ಸಮೂದಾಯವಾದ ಕೊರಗರಿಗೆ ಕಳಪೆ, ಕಲಬೆರಕೆಯ ಆಹಾರ ಪೂರೈಕೆಯಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ದೂರು ನೀಡಿದ್ದೇವೆ. ಒಬ್ಬ ನಮ್ಮ ಜನಪ್ರತಿನಿಧಿಯಾಗಿ ಮನುಷ್ಯರ ಆಹಾರದ ಬಗ್ಗೆ ಧ್ವನಿ ಎತ್ತದ ತಾವು ಪ್ರಾಣಿಗಳ ಮೇವಿನ ಬಗ್ಗೆ ಅತೀವ ಕಾಳಜಿವಹಿಸುವುದು ದುರಂತವೇ ಸರಿ. ಪೌಷ್ಟಿಕತೆಯಿಂದ ಇಡೀ ಕೊರಗ ಜನಾಂಗವೇ ನಶಿಸುತ್ತಿರುವ ಈ ಸಂಧರ್ಭದಲ್ಲಿ ಒಂದು ಪ್ರಾಣಿಯ ಬಗ್ಗೆ ಸಚಿವರಿಗೆ ಪತ್ರ ಬರೆದಿರುವ ಯಶಪಾಲ್ ಸುವರ್ಣರ ಬಗ್ಗೆ ಸೋಜಿಗವೆನಿಸುತ್ತದೆ ಎಂದು ದಲಿತ ಮುಖಂಡ ಶ್ಯಾಮರಾಜ್ ಬಿರ್ತಿ ಹೇಳಿದ್ದಾರೆ.
ಬ್ರಹ್ಮಾವರ ಕುಂಜಾಲು ದನ ರುಂಡ ಪತ್ತೆ ಪ್ರಕರಣ ಕುರಿತು ಪ್ರತಿಕ್ರಿಯಿಸಿ, ಇಲ್ಲೇ ಪಕ್ಕದ ಬಾರಕೂರು ಹನೆಹಳ್ಳಿಯ ಸೆಂಟ್ರಿಂಗ್ ಕೆಲಸ ಮಾಡುವ ಕ್ರಷ್ಣ ಎಂಬ ದಲಿತ ಯುವಕನನ್ನು ಯಾರೋ ಅಪರಿಚಿತರು ಶೂಟೌಟ್ ಮಾಡಿದಾಗ ಧ್ವನಿ ಎತ್ತದ ತಾವು (ಆರೋಪಿಗಳು ಇಂದಿಗೂ ಪತ್ತೆಯಾಗಿಲ್ಲಾ.) ಅತೀ ಹೆಚ್ಚು ದನದ ಮಾಂಸವನ್ನು ರಫ್ತು ಮಾಡುವ ದೇಶಗಳಲ್ಲಿ ಭಾರತ ದೇಶವು ಪ್ರಪಂಚದಲ್ಲೇ ಎರಡನೇ ಸ್ಥಾನದಲ್ಲಿದೆ.ಇದರ ಕನಿಷ್ಠ ಜ್ಞಾನವೂ ತಮಗಿಲ್ಲವೇ‌….ದನ ಎನ್ನುವ ಪ್ರಾಣಿಯು ತಮಗೆ ಗೋಮಾತೆ ಯಾದರೆ ದಯವಿಟ್ಟು ಅದನ್ನು ಮನೆಯಲ್ಲಿ ಕಟ್ಟಿಕೊಂಡು ಪೂಜಿಸಿ ನಮ್ಮದೇನೂ ಅಭ್ಯಂತರವಿಲ್ಲ.‌‌‌ ಆದರೆ ದೇಶಾದ್ಯಂತ ಇರುವ ದನದ ಮಾಂಸದವನ್ನು ರಫ್ತು ಮಾಡುವ ಕಾರ್ಖಾನೆಯನ್ನು ಮುಚ್ಚಿಸುವ ಬಗ್ಗೆ ಮಾತನಾಡದೇ. ಬರೀ ಇಲ್ಲಿ ಮಾತ್ರ ಗೋವಿನ ಹೆಸರಿನಲ್ಲಿ ಕೆಳವರ್ಗದ ಹುಡುಗರನ್ನು, ದಲಿತರನ್ನು ಎತ್ತಿಕಟ್ಟಿ, ಅವರ ಮೇಲೆ ಕೇಸು ಬೀಳಿಸಿ, ಜೈಲಿಗಟ್ಟಿ ತಮ್ಮ ರಾಜಕೀಯ ಬೇಳೆಯನ್ನು ದಯವಿಟ್ಟು ಬೇಯಿಸಿಕೊಳ್ಳಬೇಡೀ. ಇದು ನಮ್ಮ ಕಳಕಳಿಯ ವಿನಂತಿ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ ಎಂದಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles