ಉಡುಪಿ : ಇನ್ನೆರಡು ದಿನದಲ್ಲಿ ಎದುರು ನೋಡುತ್ತಿರುವ ಸ್ವಾತಂತ್ರ್ಯ ದಿನಾಚರಣೆಯ ಸಿದ್ಧತೆಯಲ್ಲಿದ್ದ ಉಡುಪಿಯಲ್ಲಿ ನಡುರಾತ್ರಿ ಹೊತ್ತಿಗೆ ರಕ್ತ ಹರಿದಿದೆ. ನೇಜಾರು ಒಂದೇ ಕುಟುಂಬದ ನಾಲ್ವರ ಮರ್ಡರ್ ಬಳಿಕ ಉಡುಪಿ ಬಹುತೇಕ ಶಾಂತವಾಗಿತ್ತು. ಆದರೆ ಕೇವಲ 35 ವರ್ಷದ ವಿನಯ್ ದೇವಾಡಿಗ ಫಾರ್ವಡ್ ಮಾಡಿ ಒಂದೆ ಒಂದು ಮೇಸೆಜ್ ಆತನ ಜೀವ ತೆಗೆದಿದೆ.

ಘಟನೆ: ಉಡುಪಿಯ ಪುತ್ತೂರು ಗ್ರಾಮದಲ್ಲಿ ಮಂಗಳವಾರ ರಾತ್ರಿ 11 ಗಂಟೆ ಸುಮಾರಿಗೆ ಮೂವರು ಯುವಕರು ವಿನಯ್ ದೇವಾಡಿಗ ಎನ್ನುವ ವ್ಯಕ್ತಿಯ ಮನೆಗೆ ಬಂದಿದ್ದಾರೆ. ಮನೆಯವರ ಬಳಿ ವಿನಯ್ ಇದ್ದಾನ ಎಂದು ವಿಚಾರಿಸಿ ಮನೆಯ ಒಳಗೆ ಪ್ರವೇಶಿಸಿದ್ದಾರೆ. ಪರಿಚಿತ ಮುಖವಾದ ಹಿನ್ನಲೆಯಲ್ಲಿ ಮನೆಯವರು ಅನುಮಾನ ವ್ಯಕ್ತಪಡಿಸದೆ ಮನೆಯ ಒಳಗೆ ಕರೆದಿದ್ದಾರೆ. ಮನೆಯ ಒಳಗೆ ಬಂದವರೆ ಸೀದಾ ವಿನಯ್ ಕೋಣೆಗೆ ತೆರಳಿ ವಿನಯ್ ಮೇಲೆ ತಲವಾರ್ ಬೀಸಿ ಕಡಿದು ಕೊಚ್ಚಿ ಪರಾರಿಯಾಗಿದ್ದಾರೆ. ಗಂಭೀರವಾದ ರಕ್ತ ಸ್ರಾವದಿಂದ ವಿನಯ್ ದೇವಾಡಿಗ ನ ಪ್ರಾಣ ಪಕ್ಷಿ ಹಾರಿಹೋಗಿದೆ. ಏಕಾಎಕಿ ನಡೆದ ಘಟನೆಯಿಂದ ಮನೆಯವರು ಅವಾಕ್ಕಾಗಿ ನೋಡು ನೋಡುತ್ತಲೆ ಇರುವಾಗಲೇ ಮನೆ ಮಗ ಪ್ರಾಣ ಪಕ್ಷಿ ಹಾರಿ ಹೋಗಿದೆ. ಘಟನಾಸ್ಥಳಕ್ಕೆ ಉಡುಪಿ ನಗರ ಪೊಲೀಸ್ ರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹೆಂಡತಿ ಮಗುವಿನ ಜೊತೆ ಮಲಗಿದ್ದ: ಸಂಜೆ 6 ಗಂಟೆ ಸುಮಾರಿಗೆ ಸುಸ್ತಾಗಿ ಮನೆಗೆ ಬಂದು ಹೆಂಡತಿ ಮಗುವಿನೊಂದಿಗೆ ಮಲಗಿದ್ದ ವಿನಯ್ ಗಾಢ ನಿದ್ದೆಯಲ್ಲಿದ್ದ. ರಾತ್ರಿ ಸ್ಕೂಟರ್ ನಲ್ಲಿ ಬಂದ ದುಷ್ಕರ್ಮಿಗಳು ಮನೆಯೊಳಗೆ ಬಂದವರು, ಮೊದಲು ವಿನಯ್ ಕೋಣೆಗೆ ತೆರಳಿ ಮೊಬೈಲ್ ಹುಡುಕಾಡಿದ್ದಾರೆ. ಹುಡುಕಾಟದ ಶಬ್ಧಕ್ಕೆ ಎಚ್ಚೆತ್ತ ವಿನಯ್ ನನ್ನು ತಪ್ಪಿಸಿಕೊಳ್ಳದಂತೆ ಹಿಡಿದುಕೊಂಡು ಇಬ್ಬರು ಆರೋಪಿಗಳು ಸೇರಿ ತಲವಾರು ಮತ್ತು ಚಾಕುವಿನಿಂದ ಕಡಿದು ಕೊಚ್ಚಿ ಪರಾರಿಯಾಗಿದ್ದಾರೆ. ಈ ಘಟನೆಯ ವೇಳೆ ತಡೆಯಲು ಬಂದ ಹೆಂಡತಿಯ ಕೈಗೆ ಗಂಭೀರವಾಗಿ ಗಾಯವಾಗಿದ್ದು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆರೋಪಿಗಳು ಸರೆಂಡರ್: ಪುತ್ತೂರಿನಲ್ಲಿ ತಲವಾರು ಬೀಸಿದ ಮೂವರು ಆರೋಪಿಗಳು ಮುಂಜಾನೆ ವೇಳೆ ನೇರವಾಗಿ ಬಂದು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಸರೆಂಡರ್ ಆಗಿದ್ದಾರೆ. ಬ್ರಹ್ಮಾವರ ಸಮೀಪದ ಕೊಕ್ಕರ್ಣೆ ಗಾಂಧಿ ನಗರ ನಿವಾಸಿ ಅಜಿತ್ (28) ಅಕ್ಷೇಂದ್ರ(34) ಬೆನಗಲ್ ನಿವಾಸಿ ಪ್ರದೀಪ್ ಅಚಾರ್ಯ ವಿನಯ್ ದೇವಾಡಿಗನನ್ನು ಬರ್ಬರವಾಗಿ ಕೊಂದಿರುವ ಆರೋಪಿಗಳು. ಹತ್ಯೆಯಾದ ವಿನಯ್ ದೇವಾಡಿಗ ಮತ್ತು ಹತ್ಯೆ ಮಾಡಿದ ಈ ಮೂವರು ಆರೋಪಿಗಳು ಅಪರಿಚಿತರು. ಒಟ್ಟಿಗೆ ಕೆಲಸ ಮಾಡಿಕೊಂಡು ಒಟ್ಟಿಗೆ ಜಾಲಿ ಮಾಡಿಕೊಂಡಿದ್ದ ಸ್ನೇಹಿತರು. ವಿನಯ್ ದೇವಾಡಿಗ ಪೈಟಿಂಗ್ ವೃತ್ತಿ ಮಾಡಿಕೊಂಡಿದ್ದು, ಜೊತೆಗೆ ಇದ್ದ ಸಹವರ್ತಿಗಳಿಂದಲೇ ಹತನಾದದ್ದು ಮಾತ್ರ ಕೇವಲ ಸಿಲ್ಲಿ ವಿಷಯ ಎಂದರೆ ನೀವು ನಂಬಲೇ ಬೇಕು.

ಹತ್ಯೆಗೆ ಕಾರಣ: ಇಲ್ಲಿ ಹತ್ಯೆ ಮಾಡಲು ಆರೋಪಿಗಳು ನೀಡಿದ ಕಾರಣ ಕೇಳಿ ಪೊಲೀಸ್ ಗೆ ಟೆನ್ಶನ್ ಮಾಡಿಕೊಂಡಿದ್ದಾರೆ. ಕೇವಲ ಒಂದು ಫಾರ್ವಡ್ ಮೇಸೆಜ್ ನಿಂದಾಗಿ ಒಟ್ಟಿಗೆ ಇರುತ್ತಿದ್ದ ಗೆಳೆಯ ಮೇಲೆ ತಲವಾರ ಬೀಸಿ ಕಡಿದು ಕೊಚ್ಚಿ ಕೊಂದಿದ್ದಾರೆ ಈ ಮೂವರು ಸ್ನೇಹಿತರು. ಅರೋಪಿ ಅಕ್ಷೇಂದ್ರನಿಗೆ ಇನ್ನೋರ್ವ ವ್ಯಕ್ತಿ ಜೀವನ್ ಎಂಬಾತ ಬೈದಿರುವ ಅಡಿಯೋ ಮೆಸೇಜನ್ನು ವಿನಯ್ ಮೊಬೈಲ್ ಗೆ ಬಂದಿತ್ತು. ಅದನ್ನು ವಿನಯ್ ಫಾರ್ವರ್ಡ್ ಮಾಡಿದ್ದ, ಇದರಿಂದ ಅವಮಾನಿತನಾದ ಅಕ್ಷೇಂದ್ರ ಮತ್ತು ಸ್ನೇಹಿತರು ಸೇರಿ ವಿನಯ್ ದೇವಾಡಿಗನನ್ನು ಕಡಿದು ಕೊಂದಿದ್ದಾರೆ.

ಮನೆಗೆ ಬರುತ್ತಿದ್ದ ಸ್ನೇಹಿತರಿಂದ ಹತ್ಯೆ: ವಿನಯ್ ದೇವಾಡಿಗ ಜೊತೆ ಯಾವಗಲೂ ಕಾಣಿಸಿಕೊಳ್ಳುತ್ತಿದ್ದ ಈ ಮೂವರು ರಾತ್ರಿ ವೇಳೆ ಮನೆಗೆ ಬಂದಾಗ ಮನೆಯವರು ಯಾವುದೇ ಅನುಮಾನಗೊಂಡಿಲ್ಲ. ಬಾಗಿಲು ತೆಗೆಯುವ ಮುನ್ನು ಎಂದು ವಿಚಾರಿಸಿ, ಪರಿಚಿತ ಮುಖವಾದ ಹಿನ್ನಲೆಯಲ್ಲಿ ಮನೆಯ ಒಳಗೆ ಬಿಟ್ಟಿದ್ದಾರೆ. ಇನ್ನು ಆಗಾಗ ಈ ಆರೋಪಿಗಳು ವಿನಯ್ ಮನೆಗೆ ಬರುತ್ತಾ ಹೋಗುತ್ತಾ ಇದ್ದ ಹಿನ್ನಲೆಯಲ್ಲಿ ಸ್ನೇಹಿತನನ್ನು ಮಾತನಾಡಿಸಲು ಬಂದಿರ ಬಹುದು ಎಂದು ಮನೆಯವರು, ಆರೋಪಿಗಳ ಕೈಯಲ್ಲಿದ್ದ ಮಾರಕಾಯುಧವನ್ನು ಗಮನಿಸಿಯೇ ಇರಲಿಲ್ಲ. ಮುಂಜಾನೆಯಿಂದ ವಿನಯ್ ದೇವಾಡಿಗ ಫೋನ್ ನಲ್ಲಿ ಯಾರೊಂದಿಗೋ ವಾಗ್ವದಾ ನಡೆಸುತ್ತಿದ್ದನ್ನು ಗಮನಿಸಿದ್ದ ಮನೆಯವರು, ಮನೆಗೆ ಬಂದವರು ಯಾವ ಪೂರ್ವ ಯೋಜನೆಯೊಂದಿಗೆ ಬಂದಿದ್ದಾರೆ ಎನ್ನುವ ಅರಿವು ಇಲ್ಲವಾಗಿತ್ತು. ಕಣ್ಣ ಮುಚ್ಚಿ ತೆರೆಯುದರೊಳಗೆ ಏಕಾಏಕಿ ನಡೆದ ಕೃತ್ಯದಿಂದ ಮನೆ ಮಂದಿ ಹೌಹಾರಿದ್ದಾರೆ.

ಹತ್ಯೆಯಾದವನ ಹಿನ್ನಲೆ: ಇನ್ನು ವಿನಯ್ ದೇವಾಡಿಗ ವಿಚಾರಕ್ಕೆ ಈತ ಈ ಹಿಂದೆ ಒಂದು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ. ಇದೇ ಪ್ರಕರಣದಲ್ಲಿ ವಿನಯ್ ದೇವಾಡಿಗನನ್ನು ಹತ್ಯೆ ಮಾಡಿದ ಸ್ನೇಹಿತನು ಕೂಡ ಇದ್ದ ಎನ್ನುವುದು ಪೊಲೀಸ್ ಮಾಹಿತಿ. ಅಪರಾಧಿ ಹಿನ್ನಲೆಯಿಂದ ಬಂದ ಕಾರಣ ಇಂತಹ ಸಣ್ಣ ವಿಷಯಕ್ಕೆ ತಲವಾರ ಎತ್ತಿದ್ದಾರೆ ಎನ್ನಲಾಗಿದೆ. ಕೃತ್ಯ ಮಾಡಿದ ಬಳಿಕ ನೇರವಾಗಿ ಬ್ರಹ್ಮಾವರ ಪೊಲೀಸ್ ಠಾಣೆಗೆ ತೆರಳಿ ಸರೆಂಡರ್ ಆರೋಪಿಗಳನ್ಬು ಸದ್ಯ ಪೊಲೀಸ್ ಹೆಚ್ಚಿನ ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಒಟ್ಟಾರೆಯಾಗಿ ತಣ್ಣಗೆ ಮಲಗಿದ್ದ ಉಡುಪಿಯಲ್ಲಿ ಮತ್ತೆ ನೆತ್ತರು ಹರಿದಿದೆ. ಎಲ್ಲೋ ದೂರದ ಊರಿನಲ್ಲಿ ಕೇಳುತ್ತಿದ್ದ ಗ್ಯಾಂಗ್ ವಾರ್, ತಲವಾರು ಕಾಳಗದ ಸುದ್ದಿ ಉಡುಪಿ ನಗರದಲ್ಲೆ ಕೇಳಿ ಬಂದಿರುವುದು ಸ್ಥಳೀಯ ಆತಂಕಕ್ಕೆ ಕಾರಣವಾಗಿದೆ. ಸ್ನೇಹಿತರ ಈ ಸಿಲ್ಲಿ ಜಗಳ ಈಗ ಒಂದು ಕುಟುಂಬವನ್ನೆ ಬೀದಿಗೆ ತಂದು ನಿಲ್ಲಿಸಿರುವುದು ಸತ್ಯ.


