Monday, March 2, 2026

spot_img

ಮೆಜೆಸ್ಟಿಕ್ ಪ್ರೆಸ್ ಪಾಲುದಾರೆ ಪ್ರತಿಭಾ ಶ್ರೀಧರ ರಾವ್ ನಿಧನ

ಉಡುಪಿ: ನಗರದ ತೆಂಕುಪೇಟೆಯ ಖ್ಯಾತ ಮೆಜೆಸ್ಟಿಕ್ ಪ್ರೆಸ್ ಸಂಸ್ಥೆಯ ಪಾಲುದಾರೆ ಪ್ರತಿಭಾ ಶ್ರೀಧರ ರಾವ್ (51) ಅವರು ಡಿಸೆಂಬರ್‌ 19ರಂದು ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಅವರು ವಿವೇಕಾನಂದ ಯೋಗ ವಿಜ್ಞಾನ ಕೇಂದ್ರ, ಉಡುಪಿ ಘಟಕದ ಸಕ್ರಿಯ ಸದಸ್ಯೆಯಾಗಿದ್ದು, ಹಲವು ವರ್ಷಗಳಿಂದ ಯೋಗಾಭ್ಯಾಸದಲ್ಲಿ ತೊಡಗಿಸಿಕೊಂಡಿದ್ದರು. ಶಿಸ್ತುಬದ್ಧ ಜೀವನ ಹಾಗೂ ಸರಳ ಸ್ವಭಾವದಿಂದ ಗುರುಗಳು ಮತ್ತು ಸಹಯೋಗಿಗಳ ಮೆಚ್ಚುಗೆ ಪಡೆದಿದ್ದರು.

ಮೃತರು ಪತಿ ಸಿವಿಲ್ ಇಂಜಿನಿಯರ್ ಶ್ರೀಧರ ರಾವ್, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅವರ ಅಕಾಲಿಕ ನಿಧನಕ್ಕೆ ಮುದ್ರಣಾ ಕ್ಷೇತ್ರದ ಉದ್ಯಮಿಗಳು ಹಾಗೂ ಯೋಗ ಕೇಂದ್ರದ ಸದಸ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles