ಉಡುಪಿ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಉಡುಪಿ ಪ್ರಾದೇಶಿಕ ಕೇಂದ್ರದಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಯಲ್ಲಿ ಬಿ.ಎ, ಬಿ.ಕಾಂ, ಬಿ.ಬಿ.ಎ, ಬಿ.ಸಿ.ಎ, ಬಿ.ಎಸ್.ಡಬ್ಲೂ, ಬಿ.ಲಿಬ್.ಐ.ಎಸ್.ಸ್ಸಿ ಮತ್ತು ಎಲ್ಲಾ ಬಿ.ಎಸ್ಸಿ, ಸ್ನಾತಕೋತ್ತರ ಪದವಿಗಳಾದ ಎಂ.ಎ/ಎಂ.ಕಾಂ, ಎಂ.ಬಿ.ಎ, ಎಂ.ಸಿ.ಎ, ಎಂ.ಎಸ್.ಡಬ್ಲೂ, ಎಂ.ಲಿಬ್ ಐ.ಎಸ್.ಸ್ಸಿ ಮತ್ತು ಎಲ್ಲಾ ಎಂಎಸ್ಸಿ ಪದವಿಗಳು ಮತ್ತು ಡಿಪ್ಲೋಮಾ, ಪಿಜಿ ಡಿಪ್ಲೋಮಾ, ಸರ್ಟಿಫಿಕೇಟ್ ಕೋರ್ಸ್ಗಳಿಗೆ ಪ್ರವೇಶಾತಿಗಳು ನಡೆಯುತ್ತಿದ್ದು, ಆಸಕ್ತರು ಪ್ರಾದೇಶಿಕ ಕೆಂದ್ರದಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಂ, ಕ್ರೈಸ್ತ, ಜೈನ, ಭೌದ್ದ, ಸಿಖ್ ಹಾಗೂ ಪಾರ್ಸಿ ವಿದ್ಯಾರ್ಥಿಗಳಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಮಿತಿ ಇರುವವರು ಅಗತ್ಯ ದಾಖಾಲಾತಿ ಒದಗಿಸಿದಲ್ಲಿ ಉಚಿತ ಪ್ರವೇಶಾತಿಗೆ ಅವಕಾಶವಿರುತ್ತದೆ. ಹೆಚ್ಚಿನ ವಿವರಗಳಿಗೆ ವಿಶ್ವವಿದ್ಯಾನಿಲಯದ ಅಧಿಕೃತ ವೆಬ್ಸೈಟ್ www.ksoumysuru.ac.in ಅನ್ನು ವೀಕ್ಷಿಸಬಹುದಾಗಿದೆ ಉಡುಪಿ ಪ್ರಾದೇಶಿಕ ಕೇಂದ್ರದ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.