ಉಡುಪಿ : ಮುಂದಿನ ಐದು ದಿನಗಳ ಕಾಲ ಅಂದರೆ ಅಕ್ಟೋಬರ್ 23ರಿಂದ 28ರವರೆಗೆ ಕರಾವಳಿ ಪ್ರದೇಶಗಳಲ್ಲಿ ಬಿರುಗಾಳಿ ಹವಾಮಾನ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಮೀನುಗಾರರು ಮುಂದಿನ ಐದು ದಿನಗಳವರೆಗೆ ಸಮುದ್ರ ಪ್ರವೇಶಿಸಬಾರದು ಎಂದು ಎಚ್ಚರಿಕೆ ನೀಡಿದೆ.

ಅಕ್ಟೋಬರ್ 23ರಿಂದ 24ರವರೆಗೆ ಕೇರಳ, ಕರ್ನಾಟಕ ಕರಾವಳಿ ಹಾಗೂ ಸಮೀಪದ ಸಮುದ್ರ ಪ್ರದೇಶಗಳಲ್ಲಿ, ಲಕ್ಷದ್ವೀಪ, ಕೊಮೊರಿನ್ ಪ್ರದೇಶ, ಮಾಲದ್ವೀಪ, ಆಗ್ನೇಯ ಹಾಗೂ ನೈಋತ್ಯ ಅರಬ್ಬೀ ಸಮುದ್ರ, ಪೂರ್ವ ಮಧ್ಯ ಅರಬ್ಬೀ ಸಮುದ್ರ, ತಮಿಳುನಾಡು ಕರಾವಳಿ, ಅಂಡಮಾನ್ ಸಮುದ್ರ, ಬಂಗಾಳ ಕೊಲ್ಲಿಯ ಆಗ್ನೇಯ ಭಾಗಗಳಲ್ಲಿ ಗಾಳಿಯ ವೇಗ 35 ರಿಂದ 45 ಕಿ.ಮೀ., ಕ್ಷಣಿಕವಾಗಿ 55 ಕಿ.ಮೀ.ವರೆಗೆ ಬೀಸುವ ಸಾಧ್ಯತೆ ಇದೆ. ಅರಬ್ಬೀ ಸಮುದ್ರದ ಆಗ್ನೇಯ ಭಾಗಗಳಲ್ಲಿ ಕೆಲವೆಡೆ 45 ರಿಂದ 55 ಕಿ.ಮೀ. ವೇಗದ ಬಿರುಗಾಳಿ, ಕ್ಷಣಿಕವಾಗಿ 65 ಕಿ.ಮೀ.ವರೆಗೆ ಬೀಸುವ ಸಾಧ್ಯತೆ ಇದೆ.

ಅಕ್ಟೋಬರ್ 24ರಿಂದ 25ರವರೆಗೆ ಕೇರಳ, ಕರ್ನಾಟಕ, ದಕ್ಷಿಣ ಕೊಂಕಣ, ಗೋವಾ ಕರಾವಳಿ ಹಾಗೂ ಸಮೀಪದ ಪ್ರದೇಶಗಳಲ್ಲಿ, ಲಕ್ಷದ್ವೀಪ, ಕೊಮೊರಿನ್, ಮಾಲದ್ವೀಪ ಪ್ರದೇಶ, ಆಗ್ನೇಯ ಹಾಗೂ ನೈಋತ್ಯ ಅರಬ್ಬೀ ಸಮುದ್ರ, ಪೂರ್ವ ಮಧ್ಯ ಮತ್ತು ಪಶ್ಚಿಮ ಮಧ್ಯ ಅರಬ್ಬೀ ಸಮುದ್ರ, ತಮಿಳುನಾಡು, ದಕ್ಷಿಣ ಆಂಧ್ರ ಪ್ರದೇಶ, ಶ್ರೀಲಂಕಾ ಕರಾವಳಿ, ಬಂಗಾಳ ಕೊಲ್ಲಿಯ ದಕ್ಷಿಣ ಭಾಗ, ಅಂಡಮಾನ್ ಸಮುದ್ರಗಳಲ್ಲಿ ಗಾಳಿಯ ವೇಗ 35–45 ಕಿ.ಮೀ., ಕ್ಷಣಿಕವಾಗಿ 55 ಕಿ.ಮೀ.ವರೆಗೆ ಬೀಸಲಿದೆ. ಪೂರ್ವ ಮಧ್ಯ ಅರಬ್ಬೀ ಸಮುದ್ರದ ನೈಋತ್ಯ ಭಾಗ ಹಾಗೂ ಬಂಗಾಳ ಕೊಲ್ಲಿಯ ಆಗ್ನೇಯ ಭಾಗಗಳಲ್ಲಿ 45–55 ಕಿ.ಮೀ. ವೇಗದ ಬಿರುಗಾಳಿ, ಕ್ಷಣಿಕವಾಗಿ 65 ಕಿ.ಮೀ.ವರೆಗೆ ಬೀಸುವ ಸಾಧ್ಯತೆ ಇದೆ.

ದಿನ 3 : ಅಕ್ಟೋಬರ್ 25ರಿಂದ 26ರವರೆಗೆ ಕೇರಳ, ಕರ್ನಾಟಕ, ಕೊಂಕಣ, ಗೋವಾ ಕರಾವಳಿ ಹಾಗೂ ಸಮೀಪದ ಪ್ರದೇಶಗಳಲ್ಲಿ, ಲಕ್ಷದ್ವೀಪ, ಕೊಮೊರಿನ್, ಮಾಲದ್ವೀಪ, ಅರಬ್ಬೀ ಸಮುದ್ರದ ಮಧ್ಯ ಭಾಗಗಳಲ್ಲಿ, ತಮಿಳುನಾಡು, ದಕ್ಷಿಣ ಆಂಧ್ರ ಪ್ರದೇಶ, ಶ್ರೀಲಂಕಾ ಹಾಗೂ ಅಂಡಮಾನ್ ಸಮುದ್ರಗಳಲ್ಲಿ ಗಾಳಿಯ ವೇಗ 35–45 ಕಿ.ಮೀ., ಕ್ಷಣಿಕವಾಗಿ 55 ಕಿ.ಮೀ.ವರೆಗೆ ಬೀಸುವ ಸಾಧ್ಯತೆ ಇದೆ. ಬಂಗಾಳ ಕೊಲ್ಲಿಯ ಪಶ್ಚಿಮ ಮಧ್ಯ ಭಾಗದಲ್ಲಿ 45–55 ಕಿ.ಮೀ. ವೇಗದ ಬಿರುಗಾಳಿ, ಕ್ಷಣಿಕವಾಗಿ 65 ಕಿ.ಮೀ.ವರೆಗೆ ಬೀಸುವ ಸಾಧ್ಯತೆ ಇದೆ.

ಅಕ್ಟೋಬರ್ 26ರಿಂದ 27ರವರೆಗೆ ಕೇರಳ, ಕರ್ನಾಟಕ, ಕೊಂಕಣ, ಗೋವಾ, ದಕ್ಷಿಣ ಗುಜರಾತ್ ಕರಾವಳಿ ಹಾಗೂ ಸಮೀಪದ ಸಮುದ್ರ ಪ್ರದೇಶಗಳಲ್ಲಿ, ಲಕ್ಷದ್ವೀಪ, ಕೊಮೊರಿನ್, ಮಾಲದ್ವೀಪ, ಅರಬ್ಬೀ ಸಮುದ್ರದ ಪೂರ್ವ ಮತ್ತು ಮಧ್ಯ ಭಾಗಗಳಲ್ಲಿ, ಬಂಗಾಳ ಕೊಲ್ಲಿಯ ದಕ್ಷಿಣ ಮತ್ತು ಮಧ್ಯ ಭಾಗಗಳಲ್ಲಿ, ಆಂಧ್ರ ಪ್ರದೇಶ, ಉತ್ತರ ತಮಿಳುನಾಡು ಹಾಗೂ ಅಂಡಮಾನ್ ಸಮುದ್ರದಲ್ಲಿ ಗಾಳಿಯ ವೇಗ 35–45 ಕಿ.ಮೀ., ಕ್ಷಣಿಕವಾಗಿ 55 ಕಿ.ಮೀ.ವರೆಗೆ ಬೀಸುವ ಸಾಧ್ಯತೆ ಇದೆ. ಬಂಗಾಳ ಕೊಲ್ಲಿಯ ಪಶ್ಚಿಮ ಮಧ್ಯ ಭಾಗಗಳಲ್ಲಿ 45–55 ಕಿ.ಮೀ. ವೇಗದ ಬಿರುಗಾಳಿ, ಕ್ಷಣಿಕವಾಗಿ 65 ಕಿ.ಮೀ.ವರೆಗೆ ಬೀಸಲಿದೆ.
ಅಕ್ಟೋಬರ್ 27ರಿಂದ 28ರವರೆಗೆ ಕೇರಳ, ಕರ್ನಾಟಕ, ಕೊಂಕಣ, ಗೋವಾ, ದಕ್ಷಿಣ ಗುಜರಾತ್ ಕರಾವಳಿ ಹಾಗೂ ಸಮೀಪದ ಪ್ರದೇಶಗಳಲ್ಲಿ, ಲಕ್ಷದ್ವೀಪ, ಆಗ್ನೇಯ ಅರಬ್ಬೀ ಸಮುದ್ರ, ಪೂರ್ವ ಮಧ್ಯ ಮತ್ತು ಪಶ್ಚಿಮ ಮಧ್ಯ ಅರಬ್ಬೀ ಸಮುದ್ರ, ಬಂಗಾಳ ಕೊಲ್ಲಿಯ ದಕ್ಷಿಣ ಹಾಗೂ ಮಧ್ಯ ಭಾಗಗಳಲ್ಲಿ, ಆಂಧ್ರ ಪ್ರದೇಶ ಕರಾವಳಿ ಹಾಗೂ ಅಂಡಮಾನ್ ಸಮುದ್ರದಲ್ಲಿ ಗಾಳಿಯ ವೇಗ 35–45 ಕಿ.ಮೀ., ಕ್ಷಣಿಕವಾಗಿ 55 ಕಿ.ಮೀ.ವರೆಗೆ ಬೀಸುವ ಸಾಧ್ಯತೆ ಇದೆ. ಬಂಗಾಳ ಕೊಲ್ಲಿಯ ಪಶ್ಚಿಮ ಮಧ್ಯ ಭಾಗಗಳಲ್ಲಿ 45–55 ಕಿ.ಮೀ. ವೇಗದ ಬಿರುಗಾಳಿ, ಕ್ಷಣಿಕವಾಗಿ 65 ಕಿ.ಮೀ.ವರೆಗೆ ಬೀಸುವ ಸಾಧ್ಯತೆ ಇದೆ. ಹೀಗಾಗಿ ಮುಂದಿನ ಐದು ದಿನಗಳ ಕಾಲ ಕರಾವಳಿ ಪ್ರದೇಶಗಳಲ್ಲಿ ಸಮುದ್ರ ಅಶಾಂತವಾಗುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರ ಪ್ರವೇಶಿಸಬಾರದು. ಸಮುದ್ರ ತೀರದ ಆಡಳಿತ ಹಾಗೂ ತುರ್ತು ನಿರ್ವಹಣಾ ಅಧಿಕಾರಿಗಳು ಮೀನುಗಾರರಿಗೆ ಮುನ್ನೆಚ್ಚರಿಕೆ ನೀಡುವಂತೆ ಹವಾಮಾನ ಇಲಾಖೆ ವಿನಂತಿಸಿದೆ.