Saturday, April 4, 2026

spot_img

ಮಿಸ್ ಯೂನಿವರ್ಸ್ ಕರ್ನಾಟಕ 2026: ಉಡುಪಿಯ ಸ್ಪೂರ್ತಿ ಶೆಟ್ಟಿ ಮೊದಲ ರನ್ನರ್ಸ್ ಅಪ್

ಉಡುಪಿ :  ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರ್‌ನಲ್ಲಿ ನಡೆದ ಮಿಸ್ ಯೂನಿವರ್ಸ್ ಕರ್ನಾಟಕ 2026 ಸೌಂದರ್ಯ ಸ್ಪರ್ಧೆಯಲ್ಲಿ ಉಡುಪಿಯ ಸ್ಪೂರ್ತಿ ಶೆಟ್ಟಿ ಮೊದಲ ರನ್ನರ್ಸ್ ಅಪ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಮಾರ್ಚ್ 2026ರ ಕೊನೆಯ ವಾರದಲ್ಲಿ ಸ್ಪರ್ಧೆಯ ಅಂತಿಮ 25 ಸ್ಪರ್ಧಿಗಳನ್ನು ಘೋಷಿಸಲಾಗಿದ್ದು, ಸ್ಪೂರ್ತಿ ಶೆಟ್ಟಿ ಅವರು ಟಾಪ್ 25 ಅಂತಿಮ ಸ್ಪರ್ಧಿಗಳಲ್ಲಿ ಒಬ್ಬರಾಗಿ ಆಯ್ಕೆಯಾಗಿದ್ದರು. ತಮ್ಮ ಪ್ರತಿಭೆ, ಆತ್ಮವಿಶ್ವಾಸ ಮತ್ತು ವ್ಯಕ್ತಿತ್ವದ ಮೂಲಕ ಅಂತಿಮ ಸುತ್ತಿನಲ್ಲಿ ಮೆಚ್ಚುಗೆ ಗಳಿಸಿ ಮೊದಲ ರನ್ನರ್ಸ್ ಅಪ್ ಸ್ಥಾನವನ್ನು ತಮ್ಮದಾಗಿಸಿಕೊಂಡರು.

ಈ ವರ್ಷದ ಕಿರೀಟವನ್ನು ಮಂಗಳೂರು ಮೂಲದ ಲೇಖನ ಹೆಗ್ಡೆ ಪಡೆದುಕೊಂಡರೆ, ಎರಡನೇ ರನ್ನರ್ಸ್ ಅಪ್ ಪ್ರಶಸ್ತಿಯನ್ನು ಜಾಗೃತಿ ಚೋಪ್ರಾ ಗೆದ್ದಿದ್ದಾರೆ. ಉಡುಪಿ ಮೂಲದ ಸ್ಪೂರ್ತಿ ಶೆಟ್ಟಿ ಅವರು ಈಗಾಗಲೇ ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು, ‘ಮಿಸ್ ಅಂಡ್ ಮಿಸಸ್ ಸೆಂಟ್ರಲ್ ಇಂಡಿಯಾ’ ಸೀಸನ್ 3ರಲ್ಲಿ ಭಾಗವಹಿಸಿ ಗಮನ ಸೆಳೆದಿದ್ದರು. ಇದೀಗ ಮಿಸ್ ಯೂನಿವರ್ಸ್ ಕರ್ನಾಟಕ ವೇದಿಕೆಯಲ್ಲಿ ಸಾಧನೆ ಮಾಡಿರುವುದು ಜಿಲ್ಲೆಯ ಹೆಮ್ಮೆಗೆ ಕಾರಣವಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles