ಉಡುಪಿ : ಉಡುಪಿಯ ಉಚ್ಚಿಲ ಪೊಲ್ಯ ಬಳಿ ಅಕ್ರಮವಾಗಿ ಎಂಡಿಎಂಎ ಮಾರಾಟಕ್ಕೆ ಇಳಿದಿದ್ದ ಇಬ್ಬರನ್ನು ಪೊಲೀಸ್ ರು ಬಂಧಿಸಿದ ಘಟನೆ ನಡೆದಿದೆ. ಫರ್ಹನ್ ಮತ್ತು ಮೊಹಮ್ಮದ್ ಹಾಶಿಂ ಬಂಧಿತ ಆರೋಪಿಗಳು.

ಬಡಾ ಗ್ರಾಮದ ಉಚ್ಚಿಲ ಪೊಲ್ಯ ಬುಬಲ್ ಮೈದಾನದ ಬಳಿ ಆರೋಪಿಗಳು ಎಂಡಿಎಂಎ ಮಾದಕ ವಸ್ತುವನ್ನು ಮಾರಾಟದಲ್ಲಿ ನಿರತರಾಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆ ಧಾಳಿ ಮಾಡಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಆರೋಪಿಗಳಿಂದ 9.30 ಗ್ರಾಂ ತೂಕದ ಎಂಡಿಎಂಎ ಮಾದಕ ವಸ್ತು ಮತ್ತು ನಗದು ಹಣ, ಬೈಕ್, ಮೊಬೈಲ್ ಪೋನ್ ನನ್ನು ಪೊಲೀಸ್ ರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
