Wednesday, March 4, 2026

spot_img

ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನಲ್ಲಿ ಛಾಯಾಗ್ರಹಣ ಕಾರ್ಯಾಗಾರ

ಉಡುಪಿ: ಉಡುಪಿ ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜುನಲ್ಲಿ ಫ್ರೇಮ್‌ ಯುವರ್‌ ಫ್ಯುಚರ್‌ – ಫೋಟೋಗ್ರಾಫಿ ಟು ಬ್ರೇಕ್‌ ಥ್ರೂ ಎಂಬ ವಿಶೇಷ ಕಾರ್ಯಾಗಾರ ಕಾಲೇಜಿನ ಟಿ. ಮೋಹಂದಾಸ್ ಪೈ ಪ್ಲಾಟಿನಂ ಜುಬಿಲಿ ಬ್ಲಾಕ್ ಸಭಾಂಗಣದಲ್ಲಿ ನಡೆಯಿತು. ಹಿರಿಯ ಛಾಯಾಗ್ರಾಹಕ, ಉದಯವಾಣಿ ದಿನಪತ್ರಿಕೆಯ ಹಿರಿಯ ಸುದ್ದಿಚಿತ್ರ ಪತ್ರಕರ್ತರಾದ ಅಸ್ಟ್ರೋ ಮೋಹನ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು, ವಿದ್ಯಾರ್ಥಿಗಳಿಗೆ ಛಾಯಾಗ್ರಹಣದ ಮೂಲ ತತ್ವಗಳು, ತಂತ್ರಜ್ಞಾನ ಹಾಗೂ ಛಾಯಾಗ್ರಹಣದಲ್ಲಿ ವೃತ್ತಿಜೀವನ ರೂಪಿಸುವ ಸಾಧ್ಯತೆಗಳ ಕುರಿತು ಅಮೂಲ್ಯ ಮಾರ್ಗದರ್ಶನ ನೀಡಿದರು.

  ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ದೇವೀದಾಸ್ ಎಸ್ ನಾಯಕ್ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಿಂದ ವಿದ್ಯಾರ್ಥಿಗಳಲ್ಲಿ ಛಾಯಾಗ್ರಹಣ ಕ್ಷೇತ್ರದ ಬಗ್ಗೆ ಹೊಸ ಪ್ರೇರಣೆ ಮೂಡಿದ್ದು, ಭವಿಷ್ಯದಲ್ಲಿ ಈ ಕ್ಷೇತ್ರವನ್ನು ವೃತ್ತಿಜೀವನವಾಗಿ ಆರಿಸಿಕೊಳ್ಳಲು ಉತ್ಸಾಹ ಹುಟ್ಟಿಸಿತು.

ಕಾರ್ಯಕ್ರಮದ ನಿರೂಪಣೆಯನ್ನು ದ್ವಿತೀಯ ಬಿಬಿಎ ವಿದ್ಯಾರ್ಥಿನಿ ದಿಶಾ ನಿರ್ವಹಿಸಿದರು. ಪ್ರಥಮ ಬಿಬಿಎ ವಿದ್ಯಾರ್ಥಿನಿ ಡಿಯೋನಾ ಪರ್ಲ್ ಅತಿಥಿ ಪರಿಚಯವನ್ನು ನೀಡಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles