Thursday, October 23, 2025

spot_img

ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನಲ್ಲಿ ವಿದ್ಯಾರ್ಥಿ ಕ್ಷೇಮಪಾಲನ ಮಂಡಳಿ ಉದ್ಘಾಟನ ಸಮಾರಂಭ

ಉಡುಪಿ: ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಶಿಸ್ತು ಮತ್ತು ಸಮಾಜ ಸೇವೆಯ ಮನೋಭಾವ ಬೆಳೆಸಿಕೊಳ್ಳುವಂತೆ ತಿಳಿಸಿದರು. ಯುವಕರು ದೇಶದ ಭವಿಷ್ಯದ ಕಂಬವಾಗಿರುವುದರಿಂದ ಜವಾಬ್ದಾರಿತನದಿಂದ ನಡೆದುಕೊಳ್ಳಬೇಕು ಎಂದು ತೆಂಕನಿಡಿಯೂರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಪ್ರೊ. ನಿತ್ಯಾನಂದ ವಿ. ಗಾಂವ್ಕರ್ ಎಂದರು.

 ಅವರು ಉಡುಪಿಯ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾದ ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನ 2025-26ನೇ ಸಾಲಿನ ವಿದ್ಯಾರ್ಥಿ ಕ್ಷೇಮಪಾಲನಾ ಮಂಡಳಿಯ ಸ್ಥಾಪನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು, ಕಾಲೇಜಿನ ಪ್ರಾಂಶುಪಾಲರಾದ ಡಾ. ದೇವಿದಾಸ್ ಎಸ್. ನಾಯಕ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಉಡುಪಿ ಎಂ.ಜಿ.ಎಂ. ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವನಿತಾ ಮೈಯ ಪ್ರಾಂಶುಪಾಲರು,  ಟಿ.ಎಂ.ಎ. ಪೈ ಸ್ಕಿಲ್ ಡೆವಲಪ್‌ಮೆಂಟ್ ಇನ್ಸ್‌ಟಿಟ್ಯೂಟ್ ನಿರ್ದೇಶಕ ಟಿ. ರಂಗ ಪೈ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ. ಎಂ. ವಿಶ್ವನಾಥ್ ಪೈ ಮತ್ತು ಬಿಕಾಂ/ಬಿಬಿಎ ಸಂಯೋಜಕಿ ಡಾ. ಮಲ್ಲಿಕಾ ಎ. ಶೆಟ್ಟಿ ಉಪಸ್ಥಿತರಿದ್ದರು. ಇದೇ ಕಾರ್ಯಕ್ರಮದಲ್ಲಿ 2025-26ನೇ ಸಾಲಿನ ವಿದ್ಯಾರ್ಥಿ ಕ್ಷೇಮಪಾಲನ ಮಂಡಳಿಯ ಅಧ್ಯಕ್ಷರಾಗಿ ಧೀರಜ್ (ತೃತೀಯ ಬಿಕಾಂ), ಕಾರ್ಯದರ್ಶಿಯಾಗಿ ಕ್ಯಾರೆನ್ ಲಿಸಾ ಅರೋನ್ (ತೃತೀಯ ಬಿಸಿಎ), ಉಪಾಧ್ಯಕ್ಷರಾಗಿ ಪುಣ್ಯ (ತೃತೀಯ ಬಿಸಿಎ), ಪ್ರತೀಕ್ (ತೃತೀಯ ಬಿಸಿಎ), ತೇಜಸ್ವಿ (ದ್ವಿತೀಯ ಬಿಸಿಎ), ಸಹ ಕಾರ್ಯದರ್ಶಿಗಳಾಗಿ ದನ್ಯಾ (ತೃತೀಯ ಬಿಸಿಎ), ಅನನ್ಯಾ (ತೃತೀಯ ಬಿಸಿಎ ), ಪ್ರಿಯಾ (ದ್ವಿತೀಯ ಬಿಬಿಎ),  ಕ್ರೀಡಾ ಕಾರ್ಯದರ್ಶಿಗಳಾಗಿ ಛಾಯಾ (ತೃತೀಯ ಬಿಸಿಎ), ರೋಶೆಲ್ (ತೃತೀಯ ಬಿಕಾಂ), ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪ್ರಜ್ಞಾ (ತೃತೀಯ ಬಿಸಿಎ), ಸಾಹಿತ್ಯ ಕಾರ್ಯದರ್ಶಿಯಾಗಿ ಅನುಪಮಾ (ದ್ವಿತೀಯ ಬಿಕಾಂ) ಇವರೆಲ್ಲರೂ ಪ್ರತಿಜ್ಜಾ ವಿಧಿ ಸ್ವೀಕರಿಸಿದರು. ಧೀರಜ್ ಪ್ರವೀಣ್ ಕುಮಾರ್, ತೃತೀಯ ಬಿಕಾಂ ಸ್ವಾಗತಿಸಿ, ಕ್ಯಾರನ್ ಲಿಸಾ, ತೃತೀಯ ಬಿಸಿಎ ವಂದಿಸಿ, ಮಧುರ, ದ್ವಿತೀಯ ಬಿಸಿಎ ನಿರೂಪಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles