Sunday, March 23, 2025

spot_img

ಮಲ್ಪೆ ಬಂದರಿನಲ್ಲಿ ಮಹಿಳೆಗೆ ಹಲ್ಲೆ ಒಪ್ಪಿಕೊಳ್ಳುವಂತಹದ್ದಲ್ಲ : ಕೆ.ಜಯಪ್ರಕಾಶ್ ಹೆಗ್ಡೆ

ಉಡುಪಿ: ಮಲ್ಪೆ ಬಂದರಿನಲ್ಲಿ ಮಹಿಳೆಗೆ ಹಲ್ಲೆ ನಡೆಸಿದ ಘಟನೆಯೂ ಒಪ್ಪಿಕೊಳ್ಳುವಂತಹದ್ದಲ್ಲ. ಮೀನು ಕಳವು ಮಾಡಿದ್ದರೇ ನೇರವಾಗಿ ಹಿಡಿದು ಪೋಲಿಸರಿಗೆ ಕೊಡಬಹುದಿತ್ತು. ಪ್ರತಿಭಟನೆ ಮಾಡಿದರೂ ಪ್ರಕರಣ ಹಿಂಪಡೆಯಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ. ಅವರು ಶುಕ್ರವಾರ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಪ್ರಕರಣ ಒಮ್ಮೆ ದಾಖಲಾದರೇ ನ್ಯಾಯಾಲಯದಲ್ಲಿ ತೀರ್ಮಾನ ಆಗಬೇಕು. ಮುಂದಿನ ದಿನಗಳಲ್ಲಿ ಇಂತಹ ಅಮಾನುಷ ಘಟನೆ ಮರುಕಳಿಸದಂತೆ ಎಚ್ಚರವಹಿಸಬೇಕು ಎಂದರು. ಮಲ್ಪೆ ಬಂದರಿನಲ್ಲಿ ಕಳ್ಳತನ ಪ್ರಕರ ಹೆಚ್ಚು ನಡೆಯುತ್ತಿದೆ ಎಂಬ ಆರೋಪವಿದೆ. ಈ ಬಗ್ಗೆ ಬಂದರು ನಿರ್ವಹಣೆಯಲ್ಲಿ ಸಂಬಂಧಿಸಿದ ಇಲಾಖೆಗಳು ಸಮರ್ಪಕವಾಗಿ ಮಾಡಬೇಕು. ಸಿಸಿಟಿವಿ ಅಳವಡಿಸಬೇಕು ಎಂದರು. 

ಹನಿಟ್ರಾಪ್ ನಂತಹ ಪರಿಸ್ಥಿತಿ ಯಾರಿಗೂ ಬರುವುದು  ಬೇಡ. ಯಾರು ಕೂಡ ಹನಿ ಟ್ರ್ಯಾಪ್ ಗೆ ಸಿಕ್ಕಿಹಾಕಿಕೊಳ್ಳಬಾರದು. ಹನಿಟ್ರ್ಯಾಪ್ ಮಾಡಬಾರದು, ಟ್ರ್ಯಾಪ್‌ಗೂ ಸಿಕ್ಕಿಹಾಕಿಕೊಳ್ಳಬಾರದು. ತನಿಖೆ ಮಾಡಿಸಿ ಕ್ರಮ ಕೈಗೊಳ್ಳುತ್ತೇವೆಂದು ಸರ್ಕಾರ ಹೇಳಿದ್ದು, ಮುಖ್ಯಮಂತ್ರಿಗಳು ಭದ್ರತೆ ಕೊಡುವ ಭರವಸೆ ನೀಡಿದ್ದಾರೆ ಎಂದರು. ಯಾರು ಹನಿಟ್ರಾಪ್ ಮಾಡಿದ್ದಾರೆ ಎಂದು ಗೊತ್ತಿದ್ದರೆ ಹೇಳಲಿ, ಐ ಗೋಬ್ಯಾಕ್ ದೋಸ್ ಡೇಸ್.. ನಮ್ಮ ಕಾಲ ನೆನಪಾಗುತ್ತದೆ. ಅದೊಂದು ಎಂತಹ ರಾಜಕೀಯ ಕಾಲ ಇತ್ತು, ಬದಲಾವಣೆ ನೋಡುವಾಗ ಬೇಸರವಾಗುತ್ತದೆ. ಜನಪ್ರತಿನಿಧಿಗಳ ಆಯ್ಕೆ ಮಾಡುವಾಗ ಜನರು ಎಚ್ಚೆತ್ತುಕೊಳ್ಳಬೇಕು, ಟ್ರಾಪ್ ಮಾಡಿದವರದ್ದು ತಪ್ಪಾ..? ಟ್ರ್ಯಾಪ್ ಆದವರದ್ದು ತಪ್ಪಾ? ನಾವೇ ಜಾಗೃತರಾಗಬೇಕು ಎಂದರು‌. 

ಸ್ಪೀಕರ್ ಕೂತಾಗ ವೇದಿಕೆ ಹತ್ತುವುದು ಬಹಳ ದೊಡ್ಡ ತಪ್ಪು. ಸ್ಪೀಕರ್ ಹುದ್ದೆ ಸದನದ ಉನ್ನತ ಸ್ಥಾನ, ಅವರ ಪೀಠಕ್ಕೆ ಹೋಗಬಾರದು. ಸದನದ ಕಾನೂನು ರಕ್ಷಣೆ ಮಾಡಿದವರು ಹೊರಗೆ ಯಾವ ಕಾನೂನು ರಕ್ಷಣೆ ಮಾಡುತ್ತಾರೆ? ಬೇರೆಯವರಿಗೆ ಏನು ಕಾನೂನು ರಚಿಸುತ್ತಾರೆ ಎಂಬುದು ಪ್ರಶ್ನೆ, ಆ ಕುರ್ಚಿಗೆ ಒಂದು ಘನತೆ ಇಲ್ಲವೇ? ಎಂದರು. 

ಕರಾವಳಿಯಲ್ಲಿ ಕೆಲಸ ಮಾಡಲು ಆಗುತ್ತಿಲ್ಲ ಎಂದಿರುವ ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅನುದಾನಗಳೆಲ್ಲ ಬರುವುದು ಶಾಸಕರಿಗೆ. ಹೀಗಾಗಿ ಅಧಿಕಾರಿಗಳೊಂದಿಗೆ ಕೆಡಿಪಿ ಸಭೆ ಮಾಡುವ ಅಧಿಕಾರ ಶಾಸಕರಿಗಿದೆ. ಕೆಲಸ ಮಾಡಲು ಸಾಧ್ಯ ಆಗದ ಪರಿಸ್ಥಿತಿ ಇಲ್ಲ. ವಿರೋಧ ಪಕ್ಷದವರು ಸರಕಾರವನ್ನು ದೂರುವುದು ಸ್ವಾಭಾವಿಕ. ನಾನು ಪಕ್ಷೇತರನಾಗಿಯೂ ಕೆಲಸ ಮಾಡಿದ್ದೇನೆ. ತಾಲೂಕು ಕಚೇರಿಗಳಲ್ಲಿ ಅಧಿಕಾರಿಗಳ ಸಭೆ ಕರೆದರೇ, ಜನರ ಒಂದಷ್ಟು ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಸಲಹೆ ನೀಡಿದರು. 

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles