Monday, March 2, 2026

spot_img

ಮರಣೋತ್ತರ ಕ್ರಿಯೆಗಳಿಗಾಗಿ  ಮೆಲ್ಬೋರ್ನ್ ನಲ್ಲಿ ನೂತನ ಕಟ್ಟಡದ ಉದ್ಘಾಟನೆ

ಉಡುಪಿ : ಓಂ ಶಾಂತಿ ತೀರ್ಥ ಸಂಸ್ಥೆಯು ಶ್ರೀ  ವೆಂಕಟಕೃಷ್ಣ ಬೃಂದಾವನದ ಸಹಯೋಗದೊಂದಿಗೆ ಮೆಲ್ಬೋರ್ನ್ ಮಹಾನಗರದಲ್ಲಿ ಹಿಂದೂ ಅಂತ್ಯಕ್ರಿಯೆಗಳಿಗೆ ವ್ಯವಸ್ಥೆಯನ್ನು ಪ್ರಾರಂಭಿಸಿದೆ. ದಶಕಗಳಿಂದ ಬೇಡಿಕೆಯಿರುವ ಈ ವ್ಯವಸ್ಥೆಯನ್ನು ಶ್ರೀ ಪುತ್ತಿಗೆ ಮಠದ  ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಚಾರ್ಯ ಅವರು ಉದ್ಘಾಟಿಸಿದರು.

ಓಎಸ್ ಟಿ ಕಾರ್ಯದರ್ಶಿ ರಾಧಾಕೃಷ್ಣ ಅವರು ಸಂಸ್ಥೆಯ ಸೌಲಭ್ಯಗಳನ್ನು ವಿವರಿಸಿ ಎಲ್ಲರ ಸಹಕಾರವನ್ನು ಕೋರಿದರು‌. ಈ ಕಾರ್ಯದಲ್ಲಿ ಮೆಲ್ಬೋರ್ನ್ ನಗರದ ಶ್ರೀ ವೆಂಕಟ ಕೃಷ್ಣ ಬೃಂದಾವನ ನೀಡಿದ ಸಹಕಾರವನ್ನು ಶ್ಲಾಘಿಸಿದರು.

ಸರಳವಾದ ಸಮಾರಂಭವನ್ನು ಎಸ್ ವಿಕೆಬಿ ಯ ರಮೇಶ ರಾವ್ ಸ್ವಾಗತಿಸಿದರು ಹಾಗು ಅವಿನಾಶ್ ಅಧ್ಯಾಪಕ್ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಎಸ್ ವಿಕೆಬಿ ಯ ಕಾರ್ಯಕರ್ತರು ಹಾಗು ಒಎಸ್ ಟಿ ಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles