Wednesday, March 4, 2026

spot_img

ಮದ್ಯವೆಂದು ಭಾವಿಸಿ ಬ್ರೇಕ್ ಆಯಿಲ್ ಸೇವಿಸಿದ ವೃದ್ಧ ಸಾವು..

ಉಡುಪಿ: ಮದ್ಯಪಾನವೆಂದು ತಪ್ಪಾಗಿ ಭಾವಿಸಿ ವಾಹನದ ಬ್ರೇಕ್ ಫ್ಲುಯಿಡ್ (ಬ್ರೇಕ್ ಆಯಿಲ್) ಸೇವಿಸಿದ ಪರಿಣಾಮ ವೃದ್ಧರೊಬ್ಬರು ಮೃತಪಟ್ಟ ದಾರುಣ ಘಟನೆ ಮುದ್ರಾಡಿ ಗ್ರಾಮದ ಬಲ್ಲಾಡಿ ಈಶ್ವರನಗರದಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ತಮ್ಮು ಪೂಜಾರಿ (78) ಮೃತಪಟ್ಟವರು.

 ನವೆಂಬರ್ 20ರಂದು ಮನೆಯಲ್ಲಿದ್ದ ಬ್ರೇಕ್ ಪ್ಯುಡ್ ಆಯಿಲ್ ಅನ್ನು ಮದ್ಯವೆಂದು ತಪ್ಪಾಗಿ ಭಾವಿಸಿ ಅವರು ಸೇವಿಸಿದ್ದರೆಂದು ತಿಳಿದುಬಂದಿದೆ. ವಿಷಮಯ ದ್ರವ ಸೇವನೆಯಿಂದ ಗಂಭೀರವಾಗಿ ಅಸ್ವಸ್ಥಗೊಂಡ ಅವರನ್ನು ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಡಿಸೆಂಬರ್ 2ರ ಬೆಳಗ್ಗೆ ಅವರು ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles