ಉಡುಪಿ : ಮಟ್ಕಾ ಚೀಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರ್ವ ಪೊಲೀಸ್ ರು ಇಬ್ಬರು ಬಂಧಿಸಿದ್ದಾರೆ. ವಿಠಲ ದೇವಾಡಿಗ ಮತ್ತುಲಿಯೋಕರ್ನೇಲಿಯೋ ಬಂಧಿತ ಆರೋಪಿಗಳು. ಕುರ್ಕಾಲು ಗ್ರಾಮದ ಶಂಕರಪುರದ ಅಶ್ವತಕಟ್ಟೆ ಬಸ್ ನಿಲ್ದಾಣದ ಬಳಿ ಮಟ್ಕಾ ಚೀಟಿ ಬರೆಯುತ್ತಿದ್ದ ವಿಠಲ ದೇವಾಡಿಗ ಬಂಧಿಸಿ, ಮಟ್ಕಾ ಚೀಟಿ ನೀಡುವ ಬಗ್ಗೆ ವಿಚಾರಿಸಿದಾಗ ಜೂಜಾಟದ ಬುಕ್ಕಿ ಉಡುಪಿಯ ಲಿಯೋ ಕರ್ನೆಲಿಯೋ ತಿಳಿಸಿದಂತೆ, ನಾನು ಮಟ್ಕಾ ಜುಗಾರಿ ಹಣ ಸಾರ್ವಜನಿಕರಿಂದ ಕಾನೂನು ಬಾಹಿರವಾಗಿ ಸಂಗ್ರಹಿಸುತ್ತಿರುವುದಾಗಿ ಒಪ್ಪಿಕೊಂಡಿರುತ್ತಾನೆ. ಕಾನೂನು ಬಾಹಿರವಾಗಿ ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರನ್ನು ನಂಬಿಸಿ ಮೋಸ ಮಾಡಿ ಅವರಿಂದ ಹಣ ಸಂಗ್ರಹಮಾಡುತ್ತಿದ್ದು ಹಿನ್ನಲೆಯಲ್ಲಿ ಇವರುಗಳ ವಿರುದ್ದ ಶಿರ್ವ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 37/25, ಕಲಂ 112,316(2),318(2), r/w 3(5) BNS 2023 ಮತ್ತು 78(i)(iii) K P ACT ರಂತೆ ಪ್ರಕರಣ ದಾಖಲಾಗಿದೆ. ಮೊದಲ ಆರೋಪಿ ವಿಠಲ ದೇವಾಡಿಗ ವಿರುದ್ಧ ಈಗಾಗಲೇ 12 ಪ್ರಕರಣಗಳು ದಾಖಲಾಗಿದ್ದು, ಎರಡನೇ ಆರೋಪಿಯಾದ ಲಿಯೋ ಕರ್ನೇಲಿಯೋ ವಿರುದ್ಧ ಈಗಾಗಲೇ ಸುಮಾರು 34 ಪ್ರಕರಣಗಳು ದಾಖಲಾಗಿರುತ್ತದೆ. ಇಬ್ಬರು ಆರೋಪಿಗಳನ್ನು ರಸ್ತಗಿರಿ ಮಾಡಲಾಗಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.


